ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವ ವಾಹನ ಹಾಗೂ ಚಾಲಕ ಬೆಳ್ತಂಗಡಿ ಪೊಲೀಸ್ ವಶಕ್ಕೆ

  • 18 Oct 2024 10:21:54 PM

ಬೆಳ್ತಂಗಡಿ : ಚಿಕ್ಕಮಗಳೂರಿನ ಕೊಟ್ಟಿಗೆರೆಯಿಂದ ವಿಟ್ಲ ತಾಲೂಕಿನ ಸಾಲೆತ್ತೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹೋರಿ ಮತ್ತು ಒಂದು ಗೋಮಾತೆಯನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸುವ ಮೂಲಕ ಗುರುವಾಯನಕೆರೆ ಹಾಗೂ ವಿಟ್ಲ ತಾಲೂಕಿನ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ರಕ್ಷಣೆ ಮಾಡಲಾಗಿದೆ

 

 

ವಶಕ್ಕೆ ಪಡೆದಿರುವ ಹೋರಿ ಹಾಗೂ ಗೋಮಾತೆ ಸಾಲೆತ್ತೂರಿನ ಅನ್ಯಕೋಮಿನ ವ್ಯಕ್ತಿಯೊಬ್ಬರಿಗೆ ಸೇರಿರುವುದೆಂದು ಸುದ್ದಿ ಹರಡುತ್ತಿದೆ

 

 

ಕರ್ನಾಟಕದ ಬೇರೆ ಬೇರೆ ಪ್ರದೇಶದಿಂದ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವ ಒಂದು ಮಾಫಿಯಾ ಸಾಲೆತೂರಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹಿಂದು ಕಾರ್ಯಕರ್ತರು ತಿಳಿಸಿದ್ದಾರೆ . ಮುಖ್ಯವಾಗಿ ಕೇರಳದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುವುದು ನಿತ್ಯ ನಿರಂತರವಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದರು. ವಶಕ್ಕೆ ಪಡೆದಿರುವ ವಾಹನದ ನೋಂದಣಿ ಸಂಖ್ಯೆ KA16 D6960. ಬೆಳ್ತಂಗಡಿ ಪೊಲೀಸ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಘಟನಾ ಸ್ಥಳದಲ್ಲಿ ಸೇರಿರುವ ಹಿಂದು ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.