ಕೇಲ್ತಾಜೆ: ಬಜರಂಗದಳ ಕಾರ್ಯಕರ್ತರಿಂದ ಅಕ್ರಮ ಗೋ ಸಾಗಾಟ ತಡೆ

  • 11 Nov 2024 11:52:00 AM

ಕೇಲ್ತಾಜೆ: ನವೆಂಬರ್ 11 ಸೋಮವಾರ  ಬೆಳಗಿನ ಜಾವ, ಕೇಲ್ತಾಜೆಯಲ್ಲಿ ನಿರಂತರ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಸುದಾಕರ ಆಚಾರ್ಯ ಬಜರಂಗದಳದ ಉಜಿರೆ ಮತ್ತು ಸುರ್ಯ ಘಟಕದ ಕಾರ್ಯಕರ್ತರ ಮುಂದೆ ಸಿಕ್ಕಿಬಿದ್ದು ಅವರು ಆತನನ್ನು ತಡೆಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

 


ಸುಧಾಕರ ಆಚಾರ್ಯ ಹಗಲು ಸಮಯದಲ್ಲಿ ಗೋವುಗಳನ್ನು ಮನೆಗಳಿಂದ ಪಡೆದು, ರಾತ್ರಿ ಕಸಾಯಿಖಾನೆಗೆ ಸಾಗಿಸುತ್ತಿದ್ದನೆಂದು ತಿಳಿದು ಬಂದಿದೆ.


ಕಾರ್ಯಕರ್ತರು ಪೋಲಿಸ್ ಇಲಾಖೆಯು ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದ್ದಾರೆ.