A PHP Error was encountered

Severity: Warning

Message: fopen(/tmp/ci_session2910cda949498eba03916ee43f24b3785f946805): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್: ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

  • 30 May 2025 09:46:06 PM


ದಕ್ಷಿಣ ಕನ್ನಡ : ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲೂ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತದ ವತಿಯಿಂದ ದಿನಾಂಕ 31.05.2025 ರಂದು ರೆಡ್ ಅಲರ್ಟ್ ಘೋಷಿಸಿದೆ.

 

 ಭಾರೀ ಮಳೆಯಿಂದ ಜನಜೀವನಕ್ಕೆ ತೊಂದರೆಯುಂಟಾಗುವ ಸಾಧ್ಯತೆ ಇರುವಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ.

 

ಪ್ರಮುಖವಾಗಿ, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು (CBSE, ICSE ಸೇರಿದಂತೆ), ಪದವಿಪೂರ್ವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ದಿನಾಂಕ 31.05.2025 ರಂದು ರಜೆಯನ್ನು ಘೋಷಿಸಲಾಗಿದೆ.

 

 ಇದರೊಂದಿಗೆ, ತಗ್ಗು ಪ್ರದೇಶಗಳು, ನದಿತೀರ, ಸಮುದ್ರ ತೀರಗಳಿಗೆ ಮಕ್ಕಳು ಹಾಗೂ ಸಾರ್ವಜನಿಕರು ಹೋಗದಂತೆ ಪೋಷಕರು ಮತ್ತು ಜನತೆ ಎಚ್ಚರಿಕೆಯಿಂದ ಇರಬೇಕಾಗಿ ಸೂಚಿಸಲಾಗಿದೆ.

 

ಅದೇ ರೀತಿ, ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಸೂಚನೆ ನೀಡಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿತೀರ, ಸಮುದ್ರ ತೀರ, ಚಾರಣ ಪ್ರದೇಶಗಳಿಗೆ ತೆರಳದೆ ಸುರಕ್ಷಿತ ಸ್ಥಳಗಳಲ್ಲಿ ಇರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. 

 

 

ಯಾವುದೇ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ 24x7 ಟೋಲ್ ಫ್ರೀ ಸಂಖ್ಯೆ 1077 ಅಥವಾ 0824-2442590 ನ್ನು ಸಂಪರ್ಕಿಸಬಹುದಾಗಿದೆ. 

 

ಈ ಕ್ರಮಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು, ಮಂಗಳೂರು ಪ್ರಕಟಿಸಿದ್ದಾರೆ.