A PHP Error was encountered

Severity: Warning

Message: fopen(/tmp/ci_sessiond911848879bdef1a3cc7835275df84a69bea5b66): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ನವೀಕೃತ ಮಾರ್ಗಸೂಚಿ ಪ್ರಕಟ

  • 31 May 2025 03:14:00 PM


ಬೆಂಗಳೂರು: ಬೇಸಿಗೆ ರಜೆಯ ಮುಗಿದು ಶಾಲೆಗಳು ಆರಂಭವಾಗುತ್ತಿದ್ದಂತೆಯೇ, ಮಕ್ಕಳ ಸುರಕ್ಷತೆಯ ಕುರಿತು ಆತಂಕ ಹೆಚ್ಚಾಗಿದೆ. ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. 

 

ಅದರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡುಬಂದರಲ್ಲಿ ಶಾಲೆಗೆ ಕಳುಹಿಸದೆ, ವಿಶ್ರಾಂತಿ ನೀಡಬೇಕೆಂದು ಹೇಳಿದ್ದಾರೆ.

 

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಯುಕ್ತ ಶಿವಕುಮಾರ್ ಅವರ ಅಧೀಕ್ಷಣೆಯಲ್ಲಿ ಪ್ರಕಟವಾದ ಈ ಗೈಡ್‌ಲೈನ್‌ಗಳ ಪ್ರಕಾರ, ಗುಣಲಕ್ಷಣಗಳಿರುವ ಮಕ್ಕಳನ್ನು ತಕ್ಷಣ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು.

 

 ಸೌಲಭ್ಯಗಳಲ್ಲಿ ಸ್ವಚ್ಛತೆ, ಹೈಜಿನ್‌ ಪಾಲನೆ ಕಡ್ಡಾಯವಾಗಿದ್ದು, ಶಾಲಾ ಸಿಬ್ಬಂದಿಗಳಲ್ಲಿಯೂ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದಾಗಿದೆ.

 

ಮಾರ್ಗಸೂಚಿಗಳು:

 

1. ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಕೊರೋನಾ ಸಂಬಂಧಿತ ಲಕ್ಷಣಗಳು ಕಂಡುಬಂದರೆ ಶಾಲೆಗೆ ಕಳುಹಿಸಬಾರದು.

 

 

2. ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾದ ನಂತರ ಮಾತ್ರ ಅವರನ್ನು ಶಾಲೆಗೆ ಕಳುಹಿಸಬೇಕು.

 

 

3. ಯಾವುದೇ ಗುಣಲಕ್ಷಣಗಳಿರುವ ವಿದ್ಯಾರ್ಥಿಗಳು ಶಾಲೆಗೆ ಬಂದರೆ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಬೇಕು.

 

 

4. ಶಾಲಾ ಸಿಬ್ಬಂದಿಯಲ್ಲಿ ಸಹ ಕೋವಿಡ್ ಲಕ್ಷಣಗಳು ಕಂಡುಬಂದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

 

 

5. ಶಾಲೆಗಳಲ್ಲಿ ನಿತ್ಯ ಸ್ವಚ್ಛತೆ ಕಾಪಾಡಬೇಕು. ಕೈ ತೊಳೆಯುವ ವ್ಯವಸ್ಥೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.

 

 

6. ಶಾಲಾ ಆವರಣದಲ್ಲಿ ಮಾಸ್ಕ್ ಧರಿಸುವುದು ಮತ್ತು ಹೈಜಿನ್ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಬೇಕು

 

 

ಇದೀಗ ಇಲ್ಲಿಯವರೆಗೂ ರಾಜ್ಯದಲ್ಲಿ 234 ಆಕ್ಟಿವ್ ಕೋವಿಡ್ ಪ್ರಕರಣಗಳಿದ್ದು, ಬೆಂಗಳೂರು ನಗರದಲ್ಲಿಯೇ 150ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. 

 

ಇದರ ಜತೆಗೆ ಡೆಂಗ್ಯೂ ಭೀತಿಯೂ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಗೆ ಇದು ಎರಡು ಸವಾಲಾಗಿ ಪರಿಣಮಿಸಿದೆ. ಶಾಲೆಗಳು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಜಾಗೃತೆಯಿಂದ ನಡವಳಿಕೆ ತೋರಿಸುವುದು ಅತೀ ಆಗತ್ಯವಾಗಿದೆ.