ಥೈಲ್ಯಾಂಡ್ : ಫುಕೆಟ್‌ನ ಪ್ರಸಿದ್ಧ "ಟೈಗರ್ ಕಿಂಗ್‌ಡಮ್"ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ ಮಾಡಿದ ಘಟನೆ ಸುದ್ದಿಗೆ ಎಳೆದಿದೆ.
ಹುಲಿಯೊಂದಿಗೆ ಸೆಲ್ಫಿ ತೆಗೆದು ಕೊಳ್ಳಲು ನೋಡುತ್ತಿರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಸಂಬಂಧಿಸಿದ 25 ಸೆಕೆಂಡುಗಳ ವಿಡಿಯೋವೊಂದು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗಿ ಅದರೊಂದಿಗೆ ಸೆಲ್ಫಿ ತೆಗೆಯಲು ಮುಂದಾದಾಗ ಪಕ್ಕದಲ್ಲೇ ನಿಂತಿದ್ದ ತರಬೇತುದಾರನೊಬ್ಬ ಕೋಲಿನಿಂದ ಹುಲಿಗೆ ಸೂಚನೆ ನೀಡುತ್ತಿರುವುದು ಕಂಡುಬರುತ್ತದೆ. ಆದರೆ, ಪ್ರಾಣಿ ಅಚಾನಕ್ ಆಕ್ರಮಣಕಾರಿಯಾಗಿ ವರ್ತಿಸಿ, ವ್ಯಕ್ತಿಯ ಮೇಲೆ ದಾಳಿ ಮಾಡುತ್ತದೆ.
ಆತನ ಕಿರುಚು ಕೇಳಿಸಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದ್ದು ವೈದ್ಯಕೀಯ ನೆರವಿನ , ಗಾಯಗಳು ಗಂಭೀರವಲ್ಲವೆಂದು ವರದಿಯಾಗಿದೆ.
https://x.com/TheSiasatDaily/status/1928349767559696415
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.