ಮೂಡಬಿದಿರೆ: ರಣವೇಗವಾಗಿ ಓವರ್ ಟೇಕ್ ಮಾಡಲು ಬಂದ ಖಾಸಗಿ ಬಸ್ ಕಾಲೇಜು ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಮೂಡಬಿದಿರೆಯಲಿ ನಡೆದಿದೆ .ಇದರಿಂದ ಆಕ್ರೋಶಗೊಂಡ ಎಂಐಟಿಇ ಕಾಲೇಜು ಬಸ್‌ನಲ್ಲಿ ಇದ್ದ ವಿದ್ಯಾರ್ಥಿಗಳು ಖಾಸಗಿ ಬಸ್‌ನ ಗಾಜನ್ನು ಪುಡಿ ಮಾಡಿದ್ದಾರೆ.
ಈ ಖಾಸಗಿ ಬಸ್ಸಿನ ಹೆಸರು ಮಾಸ್ಟರ್ ಬಸ್ ಎಂದು ತಿಳಿದುಬಂದಿದೆ .ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ,ಎಂದು ಘಟನಾ ಸ್ಥಳದಲ್ಲಿದ್ದ ಜನರು ತಿಳಿಸಿದ್ದಾರೆ... ಅದೇ ರೀತಿ ಈತ( ಚಾಲಕ ನಿಜಾಂ) ಖಾಕಿ ಸಮವಸ್ತ್ರ ಪಾಲಿಸದೆ ಬಸ್ಸನ್ನು ಚಲಾಯಿಸುವ ಸಂದರ್ಭದಲ್ಲಿ ರೀಲ್ಸನ್ನು ಮಾಡುತ್ತಾನೆ ಎಂದು ಕೇಳಿ ಬರುತ್ತದೆ. . .
ಅಪಘಾತದಲ್ಲಿ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿದೆ. ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎಂದು ಸುದ್ದಿ...ಇದು ಮಾತ್ರವಲ್ಲದೆ ಇತರ ಆಟೋ ಹಾಗೂ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎನ್ನಲಾಗಿದೆ ಎಂದು ತಿಳಿದುಬಂದಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮತ್ತು ಇತರ ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿ, ಚಾಲಕನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಬಸ್‌ನ ಗಾಜುಗಳನ್ನು ಒಡೆದು, ಬಸ್ ಚಾಲಕ ಮತ್ತು ಕಂಪನಿಗೆ ಹೊಣೆಗಾರಿಕೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಜೆಯ ಬೆಳವಣಿಗೆಯಲ್ಲಿ ಎಬಿವಿಪಿ ಕಾರ್ಯಕರ್ತರ ಹೋರಾಟಕ್ಕೆ ಜಯ ಸಂದಿದೆ..ಮಾಸ್ಟರ್ ಬಸ್ ಮೇಲೆ ಎಫ್ ಐ ಆರ್ ದಾಖಲು ನೀಡಿದ ವಿದ್ಯಾರ್ಥಿಗಳು. ...ಪರಿಹಾರ ಘೋಷಣೆಯಾಗಿದೆ...
ಮಾಸ್ಟರ್ ಬಸ್ ಯಶಸ್ವಿನಿ ಅವರಿಗೆ ಸೇರಿದ್ದು ಇದನ್ನು ನಡೆಸಲು ತಗೊಂಡವರು ರಫೀಕ್... ಚಾಲಕ ನಿಜಾಮ್ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳ ತೀವ್ರ ಆರೋಪ ಹಾಗೂ ಅಗ್ರಿಮೆಂಟನ್ನು ರದ್ದುಗೊಳಿಸಬೇಕೆಂದು ಆಗ್ರಹ