ಪುತ್ತೂರು : ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರು ಆಧುನಿಕ ವಸ್ತ್ರ ಹಾಕದಂತೆ ಬೋರ್ಡ್???

  • 12 Nov 2024 08:18:21 PM

ಪುತ್ತೂರು - ಜನರು ದೇವಸ್ಥಾನಕ್ಕೆ ಬರುವಾಗ, ದೇವಸ್ಥಾನಕ್ಕೆ ಅನುಕೂಲಕರವಾಗದಂತಹ ಆಧುನಿಕ ಶೈಲಿಯ ವಿಭಿನ್ನ ವಸ್ತ್ರಧಾರಣೆಗಳನ್ನು ಮಾಡುತ್ತಿದ್ದರು. 

 

ಇದು ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಬಂದು "ಭಕ್ತಾದಿಗಳ ಗಮನಕ್ಕೆ ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ ಶುಭ್ರವಾದ ಸಭ್ಯವಾದ ಉಡುಪುಗಳನ್ನು ಧರಿಸಿಯೇ ಬನ್ನಿ "ಎಂಬ ಫಲಕವನ್ನು ಇರಿಸಲಾಗಿದೆ.


ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ಡ್ರೆಸ್ ಕೋಡ್ ಅನ್ನು ಕಡ್ಡಾಯ ಮಾಡಿರುತ್ತಾರೆ.. ಅದೇ ರೀತಿ ಎಲ್ಲಾ ಭಕ್ತಾದಿ ಗಳು ಇದನ್ನು ಸ್ವಾಗತಿಸಬೇಕಾಗಿ ವಿನಂತಿಸಿರುತ್ತಾರೆ.

 

ಎಲ್ಲಾ ದೇವಸ್ಥಾನಗಳಲ್ಲೂ ಇದೇ ಮಾದರಿ ಫಲಕಗಳನ್ನು ಹಾಕಬೇಕೆಂದು ಹಾಗೂ ನಮ್ಮ ಸಂಸ್ಕಾರವನ್ನು ಉಳಿಸಬೇಕೆಂದು ಭಕ್ತಾದಿಗಳ ಆಗ್ರಹ ಹಾಗೂ ಹಿಂದುಗಳು ಇದನ್ನು ಪಾಲಿಸಬೇಕಾಗಿ ವಿನಂತಿ