ಮಥುರಾ,ಉತ್ತರಪ್ರದೇಶ: ಲವ್ ಜಿಹಾದ್ ದಂಧೆ ಬಹಿರಂಗ; ತಾನು ಹಿಂದೂ ಎಂದು ನಂಬಿಸಿ 23 ಹಿಂದೂ ಹುಡುಗಿಯರನ್ನು ಬಲೆಗೆ ಸೆಳೆದ ಇಮ್ರಾನ್ ಬಂಧನ!

  • 11 Jun 2025 01:41:18 PM


ಮಥುರಾ,ಉತ್ತರಪ್ರದೇಶ: ಹಿಂದೂ ಹುಡುಗಿಯರನ್ನು ತಾನು ಹಿಂದೂ ಎಂದು ನಂಬಿಸಿ ಪ್ರೀತಿಯ ಬಲೆಗೆ ಸೆಳೆದು, ಅವರ ಖಾಸಗಿ ವೀಡಿಯೊಗಳನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಇಮ್ರಾನ್ ಎಂಬ ಯುವಕನನ್ನು ಮಥುರಾ ಪೊಲೀಸರು ಬಂಧಿಸಿದ್ದಾರೆ.

 

 ಇಮ್ರಾನ್ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು, ನಿಕಟ ಸಂಬಂಧ ಬೆಳೆಸಿದ ನಂತರ ಹುಡುಗಿಯರನ್ನು ಶೋಷಣೆಗೆ ಒಳಪಡಿಸುತ್ತಿದ್ದನು ಎಂಬ ಆರೋಪ ಕೂಡ ಕೇಳಿಬರುತ್ತಿದೆ.

 

ಈ ಪ್ರಕರಣವು ಸಾಮಾಜಿಕ ಮಾಧ್ಯಮದಲ್ಲಿ ಇಮ್ರಾನ್ನ ಅಪಪ್ರಚೋದಕ ಪೋಸ್ಟ್ ನ ಬಳಿಕ ಬೆಳಕಿಗೆ ಬಂದಿರುತ್ತದೆ. 

 

ವಾಟ್ಸಾಪ್ ಸ್ಟೇಟಸ್ನಲ್ಲಿ ಅವನು 23 ಗೆಳತಿಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದ ಅದಲ್ಲದೆ ಕೆಲವರೊಂದಿಗೆ ತೆಗೆದ ಫೋಟೋಗಳನ್ನು ಸ್ಟೇಟಸ್‌ಗಾಗಿಯೇ ಹಾಕುತ್ತಿದ್ದುದು ಚರ್ಚೆಗೆ ಕಾರಣವಾಯಿತು. 

 

ಈ ವಿಷಯದ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಆರಂಭಗೊಂಡಿತು.

 

ಇದಕ್ಕೆ ಪೂರಕವಾಗಿ, ಬಕ್ರೀದ್ ದಿನದಂದು ಇಮ್ರಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಸಮುದಾಯದ ಭಾವನೆಗಳಿಗೆ ದಕ್ಕೆ ಮಾಡುವ ವೀಡಿಯೋ ಪೋಸ್ಟ್ ಮಾಡಿದ್ದನು. 

 

ಯಾರಿಗೆ ಬಕ್ರೀದ್ ಬಗ್ಗೆ ತೊಂದರೆ ಇದೆಯೋ, ಅವರು ಮನೆಯಿಂದ ಹೊರಬರಬೇಡಿ’ ಎಂಬ ಸಂದೇಶದ ಜೊತೆಗೆ, ಚರಂಡಿಯಲ್ಲಿ ಕೆಂಪು ನೀರು ಹರಿಯುವ ದೃಶ್ಯ ಹಾಗೂ ತಿಲಕ ಧರಿಸಿದ ಹುಡುಗಿಯೊಂದಿಗೆ ಅವನು ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.