ಜೆರುಸಲೇಮ್: ಇಸ್ರೇಲ್‌ರಿಂದ ಇರಾನ್‌ಗೆ ಶಾಕ್ ದಾಳಿ; ಇರಾನ್ ಪರಮಾಣು ಕೇಂದ್ರದ ಮೇಲೆ ಇಸ್ರೇಲ್ ಹಠಾತ್ ದಾಳಿ!

  • 13 Jun 2025 04:08:51 PM


ಜೆರುಸಲೇಮ್ : ಶುಕ್ರವಾರ ಬೆಳಗಿನ ಜಾವ ಇರಾನ್‌ನ ವಿವಿಧ ಪರಮಾಣು ನೆಲೆಗಳ ಮೇಲೆ ಇಸ್ರೇಲ್ ಹಠಾತ್ ವಾಯು ದಾಳಿ ನಡೆಸಿದೆ. 

 

ಈ ದಾಳಿಯಲ್ಲಿ ಟೆಹ್ರಾನ್ ಸೇರಿದಂತೆ ಹಲವೆಡೆ ಬೃಹತ್ ಸ್ಫೋಟಗಳು ಸಂಭವಿಸಿದ್ದು, ಹಲವು ಮುಖ್ಯಸ್ಥರು ಹತರಾಗಿರುವ ಶಂಕೆ ವ್ಯಕ್ತವಾಗಿದೆ.

 

ಟೆಹ್ರಾನ್, ಇಸ್ಫಹಾನ್, ನತ್‌ಝ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸ್ಫೋಟದ ಸದ್ದುಗಳು ಕೇಳಿಬಂದಿದೆ ಎಂದೂ, ದಾಳಿಯಿಂದ ಇರಾನ್ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಪರಮಾಣು ವಿಜ್ಞಾನಿಗಳು ಸೇರಿದಂತೆ ಅನೇಕ ಪ್ರಮುಖರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುತ್ತದೆ.

 

 ದಾಳಿಯಿಂದ ಇರಾನ್‌ಗೆ ಭಾರೀ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಹೇಳಿದೆ.

 

ಇರಾನ್ ಪರಮಾಣು ನೆಲೆಗಳನ್ನು ಗುರಿಯಾಗಿಸಿ ನಮ್ಮ ಸೇನೆ ಯಶಸ್ವಿಯಾಗಿ ದಾಳಿ ನಡೆಸಿದೆ. ಇದು ಪ್ರಾರಂಭ ಮಾತ್ರ, ಮುಂದಿನ ದಾಳಿಗಳು ನಿರಂತರವಾಗಲಿವೆ," ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಾಳಿಯ ಕುರಿತು ಸ್ಪಷ್ಟನೆ ಮತ್ತು ಎಚ್ಚರಿಕೆ ನೀಡಿದ್ದಾರೆ. 

 

ಇತ್ತೀಚೆಗೆ ಇರಾನ್ ತನ್ನ ಪರಮಾಣು ಚಟುವಟಿಕೆಗಳ ವೇಗ ವರ್ಧನೆಗೊಳಿಸಿದ್ದು, ಶೀಘ್ರದಲ್ಲೇ ಅತ್ಯಂತ ಬಲಿಷ್ಠ ಪರಮಾಣು ಶಕ್ತಿಯಾಗಲಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.

 

 ಇವುಗಳ ನಡುವೆಯೇ ಈ ದಾಳಿ ಸಂಭವಿಸಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆಯ ಮಟ್ಟ ಹೆಚ್ಚಾಗಿದೆ.