ಸುಳ್ಯ: ಸುಳ್ಯ ಪಟ್ಟಣದ ಬಾಟ ಶೋರೂಂನಲ್ಲಿ ಕೆಲಸಮಾಡುತ್ತಿದ್ದ ಹಿಂದೂ ಮಹಿಳಾ ಸಿಬ್ಬಂದಿಗೆ ಮುಸ್ಲಿಂ ಯುವಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂಬ ಆರೋಪವೊಂದು ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶೋರೂಂನ ಮಾಲಿಕನ ಅಳಿಯನಾದ Ashfaz Sullia ಎಂಬಾತ ಪದೇ ಪದೇ ಶೋರೂಂ ಗೆ ಬಂದು ಲೈಂಗಿಕ ಕಿರುಕುಳ ಯತ್ನಿಸುತ್ತಿದ್ದನೆಂದು ತಿರಸ್ಕರಿಸಿದಲ್ಲಿ ಜೀವ ಬೆದರಿಕೆಯೊಡ್ಡಿದ್ದಾನೆ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ನಂತರ ಮಹಿಳೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರಿಂದ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಜನತೆ ಈ ಘಟನೆಗೆ ಗಂಭೀರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಪೋಲೀಸರು ಆರೋಪಿಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.