ಪಾಕಿಸ್ತಾನ: ಪಾಕಿಸ್ತಾನದಲ್ಲಿ ವರ್ಷಂಪ್ರತಿ ನೂರಾರು ಹಿಂದೂ ಹುಡುಗಿಯರು ಅಪಹರಣ, ಬಲಾತ್ಕಾರ ಮತ್ತು ಧರ್ಮಾಂತರದ ಗಂಭೀರ ಘಟನೆಗಳಿಗೆ ಒಳಗಾಗುತ್ತಿದ್ದು, ಪ್ರತಿವರ್ಷ ಕನಿಷ್ಠ 1,000ಕ್ಕೂ ಹೆಚ್ಚು ಹುಡುಗಿಯರನ್ನು ಹಿಂಸೆಗೊಳಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ. ಎಂಬುದಾಗಿ ಪಾಕಿಸ್ತಾನ ಮೂಲದ ಪತ್ರಕರ್ತರೂ ಅಸಾದ್ ತೂರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ ಎಂಬ ವಿಷಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಡಿವೆ.
ಈ ಹಿಂದೂ ಹುಡುಗಿಯರು ಸಾಮಾನ್ಯವಾಗಿ ದಾರಿದ್ರ್ಯ ರೇಖೆಗೆ ಕೆಳಗಿನ ಕುಟುಂಬಗಳಾದ್ದರಿಂದ ನ್ಯಾಯಕ್ಕಾಗಿ ಹೋರಾಟ ಮಾಡುವ ಶಕ್ತಿಯೇ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಕೆಲವರನ್ನು ಶಾಲೆಗೆ ಹೋಗುವ ವೇಳೆ ಅಥವಾ ಮನೆಗೆ ಹಿಂತಿರುಗುವಾಗ ಅಪಹರಿಸಲಾಗುತ್ತದೆ. ನಂತರ ಅವರನ್ನು ಬಲವಂತವಾಗಿ ಮದುವೆ ಮಾಡಲಾಗುತ್ತದೆ ಮತ್ತು ಮತಾಂತರ ಮಾಡಲಾಗುತ್ತದೆ. ಈ ಕಾರ್ಯವೈಖರಿ ಎಷ್ಟು ಸಂಘಟಿತವಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ಹಲವು ಅನ್ವೇಷಣೆಗಳು ನಡೆಯುತ್ತಿವೆ.
ಈ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತಲುಪಿಸಲು ಕೂಡಾ ತೀವ್ರ ಅಡಚಣೆಗಳಿವೆ. ಅಪಹರಣವಾದ ಹುಡುಗಿಯರನ್ನು ನ್ಯಾಯಾಲಯದಲ್ಲಿ ‘ಸ್ವಯಂ ಇಚ್ಛೆಯಿಂದ ಮತಾಂತರಗೊಂಡೆ’ ಎಂಬಂತೆ ಹೇಳುವಂತೆ ಪ್ರಚೋದನೆ ನೀಡಲಾಗುತ್ತದೆ.
ಹಲವು ಬಾರಿ ಪೊಲೀಸರು ಅಥವಾ ಸ್ಥಳೀಯ ಅಧಿಕಾರಿಗಳು ಪ್ರಕರಣಗಳನ್ನು ಲಘುಮಟ್ಟದಲ್ಲಿ ಪರಿಗಣಿಸುತ್ತಾರೆ, ಇಲ್ಲವೇ ಪೀಡಿತರ ವಿರುದ್ಧವೇ ನಕಲಿ ಎಫ್ಐಆರ್ ದಾಖಲಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
2016ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಬಲವಂತ ಧರ್ಮಾಂತರ ತಡೆಗಟ್ಟುವ ಕಾನೂನನ್ನು ತಂದು ಹಾಕಿದರೂ, ಪ್ರಾಯೋಗಿಕವಾಗಿ ಅದನ್ನು ಜಾರಿಗೊಳಿಸುವುದರಲ್ಲಿ ಸರ್ಕಾರ ವಿಫಲವಾಗಿದೆ.
ಇದೇ ವೇಳೆ, ಇಡೀ ವಿಶ್ವದಾದ್ಯಂತ "ಲವ್ ಜಿಹಾದ್" ಕುರಿತಾಗಿ ಚರ್ಚೆಗಳು ನಡೆಯುತ್ತಿವೆ.
ಭಾರತದಲ್ಲಿಯು ಹಿಂದೂ ಸಮುದಾಯದ ಹೆಣ್ಣುಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿದ್ದಾರೆ. .
ಭಾರತದ ಅಂತರಂಗದಲ್ಲೂ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.