ತಿರುವನಂತಪುರಂ: ಭಾರೀ ಮಳೆ ನಿರೀಕ್ಷೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಅನ್ನು ಘೋಷಿಸಿದೆ.
ಜೂನ್ 15 ರಿಂದ 16ರೊಳಗಾಗಿ ಮುಂಗಾರು ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಜೂನ್ 15 ರಂದು "ಅತ್ಯಂತ ಭಾರೀ ಮಳೆ ಅಥವಾ ಅತೀ ತೀವ್ರ ಮಳೆಯಾಗುವ ಸಾಧ್ಯತೆ" ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ಜತೆಗೆ, ಪಾಲಕ್ಕಾಡ್, ಎರ್ನಾಕುಲಂ, ತ್ರಿಶೂರ್, ಇಡುಕ್ಕಿ, ಕೊಟ್ಟಾಯಂ ಹಾಗೂ ಪಥನಾಂತಿಟ್ಟ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇಲ್ಲಿ ಬಹುಷಃ ಅತ್ಯಂತ ಭಾರೀ ಮಳೆಯಾಗಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ತಿರುವನಂತಪುರಂ, ಕೊಲ್ಲಂ ಮತ್ತು ಅಲಪ್ಪುಳಾ ಜಿಲ್ಲೆಗಳಲ್ಲಿ ಕೆಲವೊಂದು ಸ್ಥಳಗಳಲ್ಲಿ ಮಾತ್ರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದಲ್ಲಿ ಸಾರ್ವಜನಿಕರು ಜಾಗರೂಕರಾಗಿರಲು, ಮತ್ತು ಅಗತ್ಯವಿಲ್ಲದ ಪ್ರಯಾಣದಿಂದ ದೂರವಿರಲು, ಸ್ಥಳೀಯ ಆಡಳಿತದ ಸೂಚನೆ ಪಾಲಿಸಬೇಕೆಂದು ಸಲಹೆ ನೀಡಿದೆ.