ಸ್ನೇಹಿತರಿಗೆ ತೋರಿಸಲೆಂದು ವೀಡಿಯೋ ಮಾಡಿದ್ದೆ… ; ಕೆಲವೇ ಕ್ಷಣದಲ್ಲಿ ವಿಮಾನ ಪತನಗೊಂಡಿತು - ಅಹಮದಾಬಾದ್ ದುರಂತದ ಸಾಕ್ಷಿ , ಆರ್ಯನ್!

  • 15 Jun 2025 06:42:45 PM


ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನದ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಶೂಟ್ ಮಾಡಿದ್ದು ಯಾರೆಂದು ಗೊತ್ತೆ?? ಕೇವಲ 17 ವರ್ಷದ ಹುಡುಗ!

 

ಆರ್ಯನ್ ಅಸಾರಿ ಎಂಬ ಯುವಕ, ತನ್ನ ಸ್ನೇಹಿತರಿಗೆ ಹತ್ತಿರದಿಂದ ಹಾದು ಹೋಗುತ್ತಿದ್ದ ವಿಮಾನವನ್ನು ತೋರಿಸವುದಕ್ಕಾಗಿ ವಿಡಿಯೋ ಸೆರೆಮಾಡುತ್ತಿರಬೇಕಾದರೆ ಕೆಲವೇ ಸೆಕೆಂಡುಗಳಲ್ಲಿ ಈ ದುರ್ಘಟನೆ ಸಂಭವಿಸಿತು.

 

ವಿಮಾನ ಲ್ಯಾಂಡ್ ಆಗುತ್ತೆ ಅನ್ಕೊಂಡೆ... ಆದರೆ ವಿಮಾನ ಪಾತನಗೊಂಡು, ಬೆಂಕಿಯ ಜ್ವಾಲೆಗಳು ಮೇಲಕ್ಕೆ ಎದ್ದವು. ನನಗೆ ಭವಾಯಿತು. ಈ ವಿಡಿಯೋ ನನ್ನ ಅಕ್ಕನಿಗೆ ತೋರಿಸಿದೆ, ಹಾಗೂ ತಂದೆಗೂ ಹೇಳಿದ್ದೇನೆ ಎಂದು ಆರ್ಯನ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ.