ರಿಪಬ್ಲಿಕ್ ನ್ಯೂಸ್:- ಪುಕ್ಕಟೆ ಭಾಗ್ಯಗಳಿಂದ ಪಟ್ಟಕ್ಕೇರಿದ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಒಂದಿಲ್ಲೊಂದು ವಿವಾದಗಳು ದಿನೇ ದಿನೆ ಸುತ್ತಿಕೊಳ್ಳುತ್ತಿದೆ. ಒಂದು ಕಡೆ ವಕ್ಫ್ ಆಸ್ತಿ ವಿಚಾರವಾಗಿ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆದರೆ, ಮತ್ತೊಂದು ಕಡೆ ಸಾಲು ಸಾಲು ಹಗರಣಗಳು ಕಾಂಗ್ರೆಸ್ ಮುಖಂಡರ ಉಸಿರುಗಟ್ಟಿಸುತ್ತಿದೆ. ಈ ನಡುವೆ ಇದೀಗ ಸಿ.ಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡುವ ಭರದಲ್ಲಿ ಕಾರ್ಯಕರ್ತರ ಮೇಲೆ ಕೋಪದಿಂದ ಕೈಮಾಡಲು ಮುಂದಾಗಿದ್ದು ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆ ನಡೆದಿದ್ದೆಲ್ಲಿ?
ಸಿ.ಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ತಮ್ಮ ಸ್ವಗೃಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಅಕ್ಕಪಕ್ಕದಲ್ಲಿ ನಿಂತು ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಕೋಪದಿಂದ ಕೈಮಾಡಲು ಮುಂದಾಗಿದ್ದಾರೆ. ಕಾರ್ಯಕರ್ತರ ಗದ್ದಲದಿಂದ ಕೋಪಗೊಂಡ ಸಿ.ಎಂ ಹಲ್ಲುಕಚ್ಚಿ, ಕೈ ಎತ್ತಿ ಗದರುತ್ತ ಹೊಡೆಯಲು ಮುಂದಾಗಿದ್ದಾರೆ.ಈ ಘಟನೆಯ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಿ.ಎಂ ನಡೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶ ವ್ಯಕ್ತ ಪಡಿಸಿದ ನೆಟ್ಟಿಗರು!
ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿ.ಎಂ ಸಿದ್ದರಾಮಯ್ಯ ಅವರ ವರ್ತನೆಯನ್ನು ಖಂಡಿಸಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲಿಸಲು, ಪ್ರಚಾರ ನಡೆಸಲು ನಿಮಗೆ ಕಾರ್ಯಕರ್ತರು ಬೇಕು, ಆದರೆ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಕಾರ್ಯಕರ್ತರ ಮೇಲೆಯೇ ಸರ್ವಾಧಿಕಾರ ಮೆರೆಯುವುದು ಎಷ್ಟು ಸರಿ? ಎಂದು ನೆಟ್ಟಿಗರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.