ಕುತ್ತಿಯಾಡಿ: ಕೇರಳದ ಕುತ್ತಿಯಾಡಿ ಎಂಬಲ್ಲಿ ಮಹಿಳಾ ವಸತಿಗೃಹದ ಬಾತ್ರೂಮ್‌ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಆರೋಪಿಯು ಸ್ಥಳೀಯ ಲ್ಯಾಬ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಅಸ್ಲಂ ಎಂಬ ಮಾಹಿತಿ ಲಭ್ಯವಾಗಿದೆ.
ಮಹಿಳೆಯರು ಅನುಮಾನ ವ್ಯಕ್ತಪಡಿಸಿ ಪರಿಶೀಲನೆ ನಡೆಸಿದಾಗ ಬಾತ್ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಸ್ಫಷ್ಟವಾಗಿ ಪತ್ತೆಯಾಯಿತು. ತಕ್ಷಣವೇ ಸುತ್ತಲಿನ CCTV ದೃಶ್ಯಗಳನ್ನು ಪರಿಶೀಲಿಸಿದಾಗ ಅಸ್ಲಂ ಕ್ಯಾಮೆರಾ ತೆಗೆದುಕೊಂಡು ಒಳಗೆ ಹೋಗಿರುವ ದೃಶ್ಯಗಳು ಸೆರೆಯಾಗಿದ್ದವು.
ಈ ಘಟನೆಯ ಮಾಹಿತಿ ತಿಳಿದ ಮಹಿಳೆಯರು ಅಸ್ಲಂನನ್ನು ತಕ್ಷಣವೇ ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಮಹಿಳಾ ವಸತಿಗೃಹದ ಸಾಂದರ್ಭಿಕತೆ, ಭದ್ರತೆಗೆ ತೀವ್ರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.