ಮಹತ್ವದ ಸುದ್ದಿ: ಸುಪ್ರೀಂ ಕೋರ್ಟ್, 2ನೇ & 4ನೇ ಶನಿವಾರಗಳು ಮತ್ತೆ ಕಾರ್ಯದಿನಗಳಾಗಿ ಘೋಷಣೆ!

  • 19 Jun 2025 03:38:09 PM


ದೆಹಲಿ: ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ ಮಹತ್ವದ ತಿದ್ದುಪಡಿ ಕೈಗೊಂಡಿದ್ದು, ಸುಪ್ರೀಂ ಕೋರ್ಟ್ (ಅಮೆಂಡ್ಮೆಂಟ್) ನಿಯಮಗಳು, 2025 ಅನ್ನು ಅಧಿಸೂಚನೆಯ ಮೂಲಕ ಪ್ರಕಟಿಸಿದೆ.

 

 ಈ ತಿದ್ದುಪಡಿಯಲ್ಲಿ ಈಗವರೆಗೂ ರಜೆ ದಿನಗಳಾಗಿದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಇನ್ನು ಮುಂದೆ ಕಾರ್ಯದಿನಗಳಾಗುತ್ತವೆ ಎಂದು ತಿಳಿಸಿದೆ.

 

 

 

ಈ ಹೊಸ ನಿಯಮಗಳು 2025ರ ಜುಲೈ 14ರಿಂದ ಜಾರಿಗೆ ಬರುವಂತಾಗಿದ್ದು, ಸುಪ್ರೀಂ ಕೋರ್ಟ್ ಕಚೇರಿಗಳು ಇನ್ನು ಮುಂದೆ ಪ್ರತೀ ಶನಿವಾರವೂ ಕಾರ್ಯನಿರ್ವಹಿಸಲಿವೆ.

 

 ಶನಿವಾರದ ಕಚೇರಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಿಗದಿಗೊಂಡಿದ್ದು, ಅರ್ಜಿ ಸ್ವೀಕರಿಸುವ ಗಡುವು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಆಗಿರುತ್ತದೆ.

 

 

 ಸೋಮವಾರದಿಂದ ಶುಕ್ರವಾರದವರೆಗೆ ಕಚೇರಿ ಕಾರ್ಯಾಚರಣೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹಿಂದಿನಂತೆಯೇ ನಡೆಯಲಿದೆ.

 

 ದಾಖಲೆ ಸಲ್ಲಿಸಲು ಕೊನೆಯ ಸಮಯ 4:30 ಗಂಟೆಯೊಳಗೆ ಆಗಿರುತ್ತದೆ. ತುರ್ತು ವಿಷಯಗಳಿಗೆ ಮಾತ್ರ ಈ ಸಮಯದ ಹೊರಗೆ ದಾಖಲಾತಿ ಅವಕಾಶ ನೀಡಲಾಗುತ್ತದೆ. 

 

ಈ ನಿರ್ಧಾರವು ಸುಪ್ರೀಂ ಕೋರ್ಟ್‌ನ ಕಾರ್ಯಪಟುತ್ವ ಹೆಚ್ಚಿಸಲು ಹಾಗೂ ನ್ಯಾಯ ಸೌಲಭ್ಯವನ್ನು ಜನರಿಗೆ ಹೆಚ್ಚು ಹತ್ತಿರ ಮಾಡಲಿರುವ ಪ್ರಯತ್ನವಾಗಿ ಪರಿಗಣಿಸಲಾಗುತ್ತಿದೆ.