ಕರ್ನಾಟಕ:- ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ರಾಜ್ಯದ ಜನತೆಯ ನಂಬಿಕೆಗೆ ಮಣ್ಣೆರೆಚಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಸಾಕಷ್ಟು ಹಿಂದೂಗಳ ಭೂಮಿ ಕಬಳಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ರಾಜ್ಯ ಕಾಂಗ್ರೆಸ್ ಮುಸ್ಲಿಂ ಸಚಿವ ಜಮೀರ್ ಅಹಮದ್ ಖಾನ್ ಮಾತಿನ ಭರದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ನಿಂದಿಸಿದ್ದಾರೆ. ಅವರ ಟೀಕಾತ್ಮಕ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಇದೀಗ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸುವಂತೆ ಒಕ್ಕಲಿಗರ ಸಂಘ ಒತ್ತಾಯಿಸಿದೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ನಿಂದಿಸಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ, ಒಕ್ಕಲಿಗರ ಮಹಾಸಭಾ ಒಕ್ಕೊರಲಿನಿಂದ ಆಗ್ರಹಿಸಿದೆ.
*ಈ ಬಗ್ಗೆ ಒಕ್ಕಲಿಗರ ಸಂಘದ ಒತ್ತಾಯವೇನು ಗೊತ್ತಾ..?*
ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ನಿಂದಿಸುವುದು, ಟೀಕಿಸುವುದು ಹೊಸತಲ್ಲ ಬಿಡಿ. ಆದರೆ ಅವರ ಬಣ್ಣವನ್ನು ಹೀಯಾಳಿಸುವುದು, ಆ ಮೂಲಕ ಒಂದು ಸಮುದಾಯವನ್ನು ಅವಹೇಳನ ಮಾಡುವುದು ರಾಜಕೀಯ ವ್ಯಕ್ತಿಗೆ ಶೋಭೆ ತರುವುದಿಲ್ಲ. ವರ್ಣ ನಿಂದನೆ ಮಾಡುವುದರಿಂದ ಅವರ ಘನತೆಯೇ ಕುಗ್ಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆಯೂ ಕೂಡಾ ಲಘುವಾಗಿ ಮಾತನಾಡಿದ್ದಾರೆ. ಎಲ್ಲ ಹೇಳಿಕೆ ನೀಡಿ ಮತ್ತೆ ಅದೇ ಸರಿಯೆಂದು ಮಾಧ್ಯಮದೆದುರು ಸಮರ್ಥನೆ ನೀಡುವ ಇಂತಹ ರಾಜಕೀಯ ಸಚಿವನ ಅವಶ್ಯಕತೆ ನಮಗಿಲ್ಲ. ಒಕ್ಕಲಿಗ ಸಮಾಜ ಈ ಟೀಕೆಯನ್ನು ಸಹಿಸುವುದಿಲ್ಲ. ಸಭ್ಯತೆಯನ್ನು ಮೀರಿ ವರ್ತಿಸುವ, ಈ ರೀತಿ ನಾಲಗೆ ಹರಿಬಿಡುವ ಇಂತಹ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು' ಎಂದು ಸಂಘ ಹಾಗೂ ಸಭಾದ ಪದಾಧಿಕಾರಿಗಳು ಆಕ್ರೋಶವನ್ನು ವ್ಯಕ್ತಪಡಿಸಿ ಅವರನ್ನು ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.