ಕರಂದಕ್ಕಾಡ್: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾಸರಗೋಡು ಜಿಲ್ಲೆಯ ಕರಂದಕಾಡಿನಲ್ಲಿ ವಿಶೇಷ ಯೋಗ ಕಾರ್ಯಕ್ರಮ ನಡೆಯಿತು. ಆಕಾಶ ಪದ್ಮ ಅವರ ನೇತೃತ್ವದ ಅಷ್ಟಾಂಗ ಯೋಗ ಕೇಂದ್ರದ ಮಕ್ಕಳಿಂದ ಮನಮೋಹಕ ಯೋಗ ಪ್ರದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು ವಿವಿಧ ಯೋಗಾಸನಗಳನ್ನು ಶಿಸ್ತಿನಿಂದ ಹಾಗೂ ಸಮರ್ಪಕ ತಾಳಮೇಳದಲ್ಲಿ ಪ್ರದರ್ಶಿಸಿದರು. ಮಕ್ಕಳ ನೈಪುನ್ಯ, ಶಿಸ್ತಿನ ಯೋಗ ಕೌಶಲ್ಯ ಪ್ರೇಕ್ಷಕರನ್ನು ಆಕರ್ಷಿಸಿತು.
ಸ್ಥಳೀಯರು ಹಾಗೂ ಪಾಲಕರಿಂದ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಹಿರಿಯರು, ಯೋಗ ಅಭ್ಯಾಸಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.