ಬದಿಯಡ್ಕ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬದಿಯಡ್ಕದ CAMPCO (ಕ್ಯಾಂಪ್ಕೊ) ಶಾಖೆಯಲ್ಲಿ ವಿಶೇಷ ಯೋಗ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸೋಮನಾಥ್ ಅವರು ಯೋಗಾಭ್ಯಾಸವನ್ನು ನಡೆಸಿಕೊಟ್ಟರು.
ವಿವಿಧ ಆಸನಗಳ ಪ್ರದರ್ಶನ ಮೂಲಕ ಯೋಗದ ಮಹತ್ವವನ್ನು ಮನವರಿಕೆ ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ CAMPCO ರಿಜಿಯೋನಲ್ ಮ್ಯಾನೇಜರ್ ಚಂದ್ರ ಎಂ ಹಾಗೂ ನಿವೃತ್ತ ಅಧಿಕಾರಿ ಗಿರೀಶ್ ಕಾನತ್ತೂರು ಭಾಗವಹಿಸಿ, ಯೋಗದ ಶಕ್ತಿಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
ದೈನಂದಿನ ಜೀವನದಲ್ಲಿ ಯೋಗದ ಅಗತ್ಯತೆ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಿನ ಪರಿಣಾಮಗಳ ಕುರಿತು ವಿವರಿಸಿದರು.
CAMPCO ನ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಯೋಗದ ಮಹತ್ವವನ್ನು ತಿಳಿದುಕೊಂಡರು.