ಪುತ್ತೂರು:- ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕಾನೂನಿಗೆ ಹೆದರುವವರ ಸಂಖ್ಯೆ ಕಡಿಮೆಯಾಗಿದೆ. ಪ್ರಕರಣಗಳು ಅದೆಷ್ಟೇ ಗಂಭೀರವಾಗಿದ್ದರೂ ಕೂಡಾ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಮಾತ್ರ ನಮ್ಮ ದೇಶದ ಕಾನೂನು ಹಿಂದೆ ಮುಂದೆ ನೋಡುತ್ತಿದೆ. ಅದರಲ್ಲೂ ಲವ್ ಜಿಹಾದ್ ನಂತಹ ನೀಚ ಕೃತ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಇದೀಗ ಒಂಭತ್ತು ವರ್ಷದ ಹಿಂದೆ ನಡೆದ ಇಂತಹುದೇ ರೀತಿಯ ಪ್ರಕರಣಕ್ಕೆ ನ್ಯಾಯಾಲಯ ಮಹತ್ವದ ತೀರ್ಪು ನೀಡುವುದರ ಮುಖೇನ ತೆರೆ ಎಳೆದಿದೆ. ಒಂಭತ್ತು ವರ್ಷದ ಹಿಂದೆ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಲು ಕೋರ್ಟ್ ಆದೇಶಿಸಿದೆ.
ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಅಲಿಯಾಸ್ ಮುಸ್ತಾಫ ಶೇಖ್ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.
*ಏನಿದು ಪ್ರಕರಣ..?*
2015ರ ಡಿಸೆಂಬರ್ 4ರಂದು ನಡೆದ ಘಟನೆ ಇದಾಗಿದ್ದು, ಕಬಕ ಗ್ರಾಮದಲ್ಲಿ ಒಬ್ಬಾಕೆಯೇ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕಾಮುಕನಾದ ಆರೋಪಿ ಮೊಹಮ್ಮದ್ ಮುಸ್ತಾಫ ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿ ತನ್ನ ಕಾಮದಾಹ ತೀರಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಗಾಬರಿಗೊಂಡ ಬಾಲಕಿ ಆತನಿಂದ ತಪ್ಪಿಸಿಕೊಂಡು ಹೋಗಿ ಮನೆಯವರಲ್ಲಿ ತನಗಾದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಿದ್ದರು.
*ಕೋರ್ಟ್ ಆದೇಶವೇನು...?*
ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸರಿತಾ ಡಿ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು ಆರೋಪಿಗೆ ಶಿಕ್ಷೆ ವಿಧಿಸಿ ಜೊತೆಗೆ ದಂಡ ಕೂಡಾ ಕಟ್ಟುವಂತೆ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಧೀಶರು 14 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದರು. ಈ ಹಿನ್ನೆಲೆ ಆರೋಪಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆ ಆತನಿಗೆ ಮೂರು ವರ್ಷ ಜೈಲು ಮತ್ತು 21400 ರೂ. ದಂಡ ವಿಧಿಸಲಾಗಿದೆ. ಆರೋಪಿಗೆ ವಿಧಿಸಲಾದ ದಂಡದ ಮೊತ್ತದಲ್ಲಿ 15000ರೂ.ನ್ನು ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಕೋರ್ಟ್ ಖಡಕ್ ತೀರ್ಪು ನೀಡಿದೆ. ಈ ಮೂಲಕ ಬಾಲಕಿಯನ್ನೂ ಬಿಡದೆ ಆಕೆಯ ಬೆನ್ನು ಬಿದ್ದ ಆರೋಪಿ ಮಹಮ್ಮದ್ ಮುಸ್ತಾಫನಿಗೆ ಶಿಕ್ಷೆಯ ಬಿಸಿ ಮುಟ್ಟಿದೆ.