ಶಿರಿಯಾ: ಶಿರಿಯಾದಲ್ಲಿ ಜ್ಯೋತಿಷ್ ಅವರ ಫ್ಲೆಕ್ಸ್ ಹರಿದಅನ್ಯಮತೀಯ ಯುವಕನೊಂದಿಗೆ ಹನಿ ಉಪ್ಪಳ ಅವರ ಫೋಟೋ ಇದೀಗ ವೈರಲ್ ಆಗುತ್ತಿದೆ.
ಫ್ಲೆಕ್ಸ್ ಹರಿದಿರುವ ಆರೋಪಿಯ ಜೊತೆಗಿನ ಹನಿ ಉಪ್ಪಳ ಪೋಟೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಕುರಿತಾಗಿ ಭಾರಿ ಚರ್ಚೆ ನಡೆಯುತ್ತಿದೆ.
ಹಿಂದೂ ಕಾರ್ಯಕರ್ತರೊಡನೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಈ ಯುವಕನಿಗೆ ಇವನೊಂದಿಗಿರುವ ಸಂಬಂಧ ಏನು ಎಂಬುವುದು ಜನರಲ್ಲಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ವೈರಲ್ ಆಗಿರುವ ಈ ಫೋಟೋ ನೀಲಿ ಶರ್ಟ್ ಧರಿಸಿದ ವ್ಯಕ್ತಿ ಉಪ್ಪಳದ ಹತ್ತಿರದ ಸ್ಥಳೀಯ ಪ್ರದೇಶದಲ್ಲಿ ಸಂಘಪರಿವಾರ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪಾಲ್ಗೊಳ್ಳುತ್ತಿದ್ದಾನೆ ಎಂಬ ದೃಢ ಮಾಹಿತಿಗಳು ಕೂಡ ಲಭ್ಯವಾಗಿವೆ. ಈತ ಐಲ ದೇವಸ್ಥಾನದ ವಲಯದಲ್ಲೂ ಹಿಂದೂ ಯುವಕರೊಂದಿಗೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುತ್ತಾನೆ.
ಇದೀಗ ಈತ ಫ್ಲೆಕ್ಸ್ ಹರಿದವನೊಂದಿಗೆ ಇದ್ದ ಫೋಟೋ, ಅವರಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ಸಂಶಯ ಹುಟ್ಟಿಸಿದೆ.
ಒಬ್ಬ ವರ್ಗೀಯ ಧೃಷ್ಟಿಕೋನ ಹೊಂದಿರುವ ವ್ಯಕ್ತಿಯ ಜೊತೆಗೆ ಇದ್ದು, ಮತ್ತೊಂದು ಕಡೆ ಹಿಂದೂ ಧ್ವಜ ಹಿಡಿದಿರುವ ಯುವಕರೊಂದಿಗೆ ಇದ್ದರೆ, ಇದು ಸಂಘಟನೆಯ ಒಳಗಿನ ಭದ್ರತೆಗೆ ಹೊಣೆ ಹೊರುವ ವಿಷಯವಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಆದ್ದರಿಂದ ಅವನ ಜೊತೆಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಎಚ್ಚರದಿಂದಿರಬೇಕು ಉತ್ತಮ ಎಂಬುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಸಂಘಟನೆಗಳು ಹಾಗೂ ನಾಗರಿಕರು ಪರಿಶೀಲನೆ ಆರಂಭಿಸಿದ್ದು, ಸತ್ಯ ಹೊರಬರುವ ತನಕ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.