ಅಮೆರಿಕಾ: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮರು ಯುದ್ಧಕ್ಕೆ ಹತ್ತಿದಂತೆ ಕಂಡುಬರುತ್ತಿದ್ದು, ಇದೀಗ ಅಮೆರಿಕ ನೇರವಾಗಿ ಈ ಸಂಘರ್ಷಕ್ಕೆ ಕಾಲಿಟ್ಟಿದೆ.
ಜೂನ್ 21ರ ರಾತ್ರಿ ಅಮೆರಿಕ ತನ್ನ ಯುದ್ಧವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಮೂಲಕ ಇರಾನ್ನ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಪಹಾನ್ ಮೇಲೆ ತೀಕ್ಷ್ಣ ದಾಳಿ ನಡೆಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದು, ದಾಳಿ ಸಂಪೂರ್ಣ ಯಶಸ್ವಿಯಾಗಿದೆ ಮತ್ತು ಎಲ್ಲಾ ಯುದ್ಧವಿಮಾನಗಳು ಸುರಕ್ಷಿತವಾಗಿ ಮರಳಿವೆ ಎಂದು ತಿಳಿಸಿದ್ದಾರೆ. ಹಾಗೆಯೇ ಇದು ಶಾಂತಿಯ ಸಮಯ ಎಂಬ ಶಬ್ದಗಳಲ್ಲಿ ಅವರು ಭವಿಷ್ಯದಲ್ಲಿ ಶಮನದ ಸಂದೇಶವನ್ನೂ ನೀಡಿದ್ದಾರೆ.
ಇದರ ಬೆನ್ನಲ್ಲೇ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದ್ದು, “ನೀವು ಪ್ರಾರಂಭಿಸಿದ್ದೀರಿ, ಆದರೆ ಅದನ್ನು ಮುಗಿಸುವವರು ನಾವು” ಎಂಬ ಗಂಭೀರ ಎಚ್ಚರಿಕೆಯನ್ನು ಅಮೆರಿಕಗೆ ರವಾನಿಸಿದೆ.
ಫೋರ್ಡೋ ಮೇಲಿನ ದಾಳಿಯನ್ನು ಇರಾನ್ನ ಕೋಮ್ ಸ್ಥಳೀಯ ಆಡಳಿತ ದೃಢಪಡಿಸಿದ್ದು, ಉಳಿದ ತಾಣಗಳಿಗೂ ದಾಳಿ ನಡೆದಿದೆ ಎಂಬ ಮಾಹಿತಿ ಇರಾನ್ ಸರ್ಕಾರಿ ಮಾಧ್ಯಮಗಳಿಂದ ಬಂದಿದೆ. ಸ್ಥಳಾಂತರ ಕಾರ್ಯ ಆರಂಭಿಸಿ ಯಾವುದೇ ಪರಮಾಣು ಸೋರಿಕೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಭಾವ ಬೀರುತ್ತಿದ್ದು, ಬಹುತೇಕ ರಾಷ್ಟ್ರಗಳು ತಕ್ಷಣ ಶಾಂತಿ ಸ್ಥಾಪನೆಗಾಗಿ ಆಗ್ರಹಿಸುತ್ತಿವೆ.
ಮುಂದಿನ ಕೆಲ ಗಂಟೆಗಳು ವಿಶ್ವ ರಾಜಕೀಯದ ಗಂಭೀರ ತಿರುವಾಗಬಹುದು ಎಂಬ ಊಹೆಗಳು ಹೊರ ಬೀಳುತ್ತಿವೆ.
ಇಸ್ರೇಲ್-ಇರಾನ್ ನಡುವೆ ಕಳೆದ ಕೆಲವು ವಾರಗಳಿಂದ ಉದ್ವಿಗ್ನತೆ ಹೆಚ್ಚಾಗಿದ್ದು, ಈಗ ಅಮೆರಿಕದ ನೇರ ಸೇನಾ ಎಂಟ್ರಿಯಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.