ಟೆಹರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸ್ಥಿತಿ ನಡುವೆ ಯಾವುದೇ ಕದನ ವಿರಾಮ ಅಥವಾ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಒಪ್ಪಂದ ನಡೆದಿಲ್ಲ ಎಂಬುದರ ಕುರಿತಾಗಿ ಇರಾನ್ ವಿದೇಶಾಂಗ ಉಪಮಂತ್ರಿ ಅಬ್ಬಾಸ್ ಅರಾಗ್ಚಿ ಸ್ಪಷ್ಟನೆ ನೀಡಿದ್ದಾರೆ.
https://x.com/araghchi/status/1937311435882922420
ಅಮೆರಿಕದ ಶ್ವೇತಭವನ ಇಸ್ರೇಲ್–ಇರಾನ್ ನಡುವೆ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ ಬೆನ್ನಲ್ಲೇ, ಅಬ್ಬಾಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.
"ಇಸ್ರೇಲ್ ದಾಳಿ ನಿಲ್ಲಿಸಿದ ಕೂಡಲೇ ನಾವು ನಿಲ್ಲಿಸುತ್ತೇವೆ. ಯುದ್ಧ ಪ್ರಾರಂಭಿಸಿದವರು ನಾವು ಅಲ್ಲ, ಇಸ್ರೇಲ್. ಈವರೆಗೂ ಕದನ ವಿರಾಮ ಅಥವಾ ಸೇನಾ ಕಾರ್ಯಾಚರಣೆ ಸ್ಥಗಿತ ಕುರಿತು ಯಾವುದೇ ಒಪ್ಪಂದವಿಲ್ಲ, ನಡೆದಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
ಅದರ ಜತೆಗೆ, ಇರಾನ್ ಜನತೆ ಮೇಲೆ ಇಸ್ರೇಲ್ ಆಡಳಿತ ನಡೆಸುತ್ತಿರುವ ಕಾನೂನು ಬಾಹಿರ ಆಕ್ರಮಣ ಟೆಹರಾನ್ ಸಮಯ ಬೆಳಿಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ಅವರನ್ನು ಪ್ರತಿದಂದಿಸುವ ಉದ್ದೇಶವಿಲ್ಲ. ಆದರೆ, ನಮ್ಮ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು, ಎಂದು ಅವರು ಹೇಳಿದ್ದಾರೆ