ಕೊಚ್ಚಿನ್: ಕೊಚ್ಚಿನ್ ನಿಷೇಧಿತ ಪೋಪುಲರ್ ಫ್ರಂಟ್ ಸಂಘಟನೆಯ ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿ 950ಕ್ಕೂ ಹೆಚ್ಚು ಮಂದಿಯ ಹೆಸರುಗಳಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಮಾಹಿತಿ ನೀಡಿದೆ.
ಕೇರಳದ ಒರ್ವ ಜಿಲ್ಲಾ ನ್ಯಾಯಾಧೀಶರು, ಆರ್.ಎಸ್.ಎಸ್., ಹಿಂದು ಸಂಘಟನೆಗಳು, ಮತ್ತು ಬಿಜೆಪಿಯ ಪ್ರಮುಖ ಮುಖಂಡರುಗಳು ಈ ಹಿಟ್ ಲಿಸ್ಟ್‌ನಲ್ಲಿ ಸೇರಿರುವುದಾಗಿ ಎನ್.ಐ.ಎ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಘಟನೆಯ ವಿರುದ್ಧ ನಿಲ್ಲುವವರನ್ನು ಗುರಿಯಾಗಿಸಿ ಹತ್ಯೆಗೈಯುವ ಉದ್ದೇಶದಿಂದ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಎನ್.ಐ.ಎ ಹೇಳಿದೆ.
ಪೋಪುಲರ್ ಫ್ರಂಟ್ ಸಂಘಟನೆಯ ಭಯೋತ್ಪಾದಕರ ಜಾಮೀನನ್ನು ವಿರೋಧಿಸಿ ನಡೆದ ವಾದದ ಸಂದರ್ಭದಲ್ಲಿ ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಬಂಧಿತ ತಾಜುದ್ದೀನ್‌ನಿಂದ 240 ಮಂದಿಯ, ಅಹಮ್ಮದ್ ಸಾದಿಕ್‌ನಿಂದ 5 ಮಂದಿಯ, ,ಇನ್ನೊಬ್ಬನಿಂದ 232 ಮಂದಿಯ ಹಾಗೂ ಆಯೂಬ್‌ನಿಂದ 500 ಮಂದಿಯ ಹಿಟ್ ಲಿಸ್ಟ್‌ಗಳು ವಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದೇ ವೇಳೆ, ಗಲ್ಫ್ ರಾಷ್ಟ್ರಗಳಿಂದ ಚಾರಿಟಿ ಹೆಸರಿನಲ್ಲಿ ಪೋಪುಲರ್ ಫ್ರಂಟ್ ಇನ್ನೂ ಹಣ ಸಂಗ್ರಹಿಸುತ್ತಿದೆ ಎಂದು ಎನ್.ಐ.ಎ ಆರೋಪಿಸಿದೆ.
ಈ ಹಣವನ್ನು ಬಳಸಿಕೊಂಡು ಆಯುಧ ತರಬೇತಿ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಸಹ ನ್ಯಾಯಾಲಯಕ್ಕೆ ಒದಗಿಸಿದೆ.