ನವ ದೆಹಲಿ: ವಾಣಿಜ್ಯ ಕ್ಷೇತ್ರದ ವ್ಯಾಪಾರಿಗಳಿಗೆ ಹಾಗೂ ಹೋಟೆಲ್–ರೆಸ್ಟೋರೆಂಟ್ ಉದ್ಯಮಿಗಳಿಗೆ ಒಂದು ಸಿಹಿ ಸುದ್ದಿ.
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿವೆ. ಈ ಕಡಿತ ಬೆಲೆ ಇಂದು ಜುಲೈ 1ರಿಂದ ಅಂದರೆ ಇಂದಿನಿಂದ ಜಾರಿಯಾಗಿದೆ.
ಈ ಬಾರಿಯ ಪರಿಷ್ಕರಣೆಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹58.50 ರಷ್ಟು ಇಳಿಕೆಯಾಗಿದ್ದು, ದೆಹಲಿಯಲ್ಲಿ ಹೊಸ ಬೆಲೆ ₹1,665 ಆಗಿದೆ. ಈ ಹಿಂದೆ ಇದು ₹1,723.50 ಆಗಿತ್ತು.
ಈ ನಿರ್ಧಾರವು ಹೋಟೆಲ್, ರೆಸ್ಟೋರೆಂಟ್ ಹಾಗೂ ಫುಡ್ ಇಂಡಸ್ಟ್ರಿಗಳಲ್ಲಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳ ನಡುವೆಯೂ ನಿಟ್ಟುಸಿರು ಬಿಡುವಂತಾಗಿದೆ.
ಕಡಿತದ ಪರಿಣಾಮವಾಗಿ ಆಹಾರ ವಿತರಣೆ ಹಾಗೂ ರೆಸ್ಟೋರೆಂಟ್ ಸೇವೆಗಳ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಇಳಿಯುತ್ತದೆ.
ಇದರೊಂದಿಗೆ 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿಮಾಸದ ಪ್ರಥಮ ದಿನಾಂಕದಲ್ಲಿ ಪರಿಷ್ಕರಣೆ ನಡೆಸುತ್ತಿದ್ದು, ತೈಲ ಬೆಲೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಗುವ ಬದಲಾವಣೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.