ಉಡುಪಿ: ಕುಂಬಳೆಯಿಂದ ನಾಪತ್ತೆಯಾಗಿದ್ದ ಯುವ ಪ್ರೇಮಿಗಳು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಜೋಡಿಯನ್ನು ಸಾಮಾಜಿಕ ಕಾರ್ಯಕರ್ತರು ಪತ್ತೆಹಚ್ಚಿದ್ದು, ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ.
ಪ್ರೇಮಿಗಳ ವರ್ತನೆಯಲ್ಲಿ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಲ್ಲಿ, ಅವರು ನಾಪತ್ತೆಯಾಗಿದ್ದವರೆಂದು ತಿಳಿದು ಬಂದಿದೆ.
ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಯಾರಿಗೂ ತಿಳಿಯದೆ ಜೋಡಿಗಳು ಮne ಬಿಟ್ಟು ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ಸ್ಪೆಕ್ಟರ್ ಮಧುಸೂದನ್ ನೇತೃತ್ವದಲ್ಲಿ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅವರನ್ನು ಇಳಿಸಿ, ತದನಂತರ ಸಮಾಜಸೇವಕ ನಿತ್ಯಾನಂದ ಒಳಕಾಡುರವರ ಸಹಕಾರದಿಂದ, ಪ್ರೇಮಿಗಳನ್ನು ಉಡುಪಿಯ ನಗರ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಅವರ ವಯಸಿನ ಮೇಲೆ ಅನುಮಾನ ಇದ್ದ ಕಾರಣ, ಮಕ್ಕಳ ಸಹಾಯವಾಣಿಗೂ ವಿಷಯ ತಿಳಿಸಲಾಗಿದ್ದು, ಪ್ರೇಮಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕುಂಬಳೆ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ.