ಚಿಕ್ಕಮಂಗಳೂರು: ಮೂಡಿಗೆರೆಯ ಎತ್ತಿನಭುಜ ಚಾರಣಕ್ಕೆ ಒಂದು ತಿಂಗಳ ಕಾಲ ತಾತ್ಕಾಲಿಕ ನಿಷೇಧ

  • 01 Jul 2025 05:36:49 PM


ಚಿಕ್ಕಮಂಗಳೂರು : ಮೂಡಿಗೆರೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಚಾರಣವನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ. 

 

ಇಂದು (ಜುಲೈ 1)ರಿಂದ ಒಂದು ತಿಂಗಳವರೆಗೆ ಚಾರಣ ಸಂಪೂರ್ಣ ಬಂದ್ ಮಾಡಲಾಗಿದೆ.

 

ಪ್ರತಿ ವರ್ಷ ಹಸಿರು ಪ್ರಾಕೃತಿಕ ಸೌಂದರ್ಯವನ್ನು ಆನಂದಿಸಲು ಸಾವಿರಾರು ಪ್ರವಾಸಿಗರು ಸುಮಾರು 7 ಕಿಲೋಮೀಟರ್ ಪಾದಚಾರಣೆಯ ಮೂಲಕ ಎತ್ತಿನಭುಜಕ್ಕೆ ಬರುತ್ತಾರೆ. 

 

ಆದರೆ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾದ್ದರಿಂದ ಮತ್ತು ಕವಿದ ಮಂಜು, ಜಾರುವ ಹಾದಿಗಳು, ಕಾಡುಪ್ರಾಣಿಗಳ ಹಾವಳಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗಾಗಿ ವಾಹನ ಪ್ರಯಾಣ ಸಾಧ್ಯವಿಲ್ಲ. ಆದ್ದರಿಂದ ಇಲ್ಲಿಯ ಪ್ರವಾಸವನ್ನು ಅಪಾಯಕಾರಿ ಇಂದು ಪರಿಗಣಿಸಿ ಒಂದು ತಿಂಗಳಿಗೆ ಪ್ರವಾಸ ಬಂದ್ ಮಾಡಲಾಗಿದೆ.

 

ಸ್ಥಳೀಯರಿಂದಲೂ ಚಾರಣ ಬಂದ್ ಮಾಡುವ ಬಗ್ಗೆ ಒತ್ತಾಯ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ತಾತ್ಕಾಲಿಕ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

 

 ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ