ದ. ಕ: ಹಿಂದೂ ಸಂಘಟಕರ ಮೇಲೆ ಕಾನೂನು ಬಾಹಿರ ಕ್ರಮ: ಜುಲೈ 7ರಂದು ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನೆ ಕರೆ

  • 02 Jul 2025 11:53:00 PM


ದ. ಕ: ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕ್ರಮಗಳ ವಿರುದ್ಧ ಹಿಂದು ಜಾಗರಣ ವೇದಿಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಜುಲೈ 7ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿದೆಡೆಗಳಲ್ಲಿ ಹಿಂದೂ ಸಂಘಟನೆ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.

 

ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹ ಸಂಚಾಲಕ ಮಹೇಶ್ ಕಡಗದಾಳು ಪತ್ರಿಕಾ ಪ್ರಕಟಣೆಯ ಮೂಲಕ ಈ ಮಾಹಿತಿ ನೀಡಿದ್ದಾರೆ. ಹಿಂದಿನ ಎರಡು ತಿಂಗಳಲ್ಲಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗಿದ್ದು, ಯಾವುದೇ ನೋಟಿಸ್ ನೀಡದೇ ಬಂಧನಕ್ಕೆ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬುದಾಹಿಯೂ ಇತ್ತೀಚೆಗೆ ಪುತ್ತೂರಿನ ಜಿಲ್ಲಾ ಸಹ ಸಂಚಾಲಕ ಶ್ರೀ ಸಮಿತ್ ರಾಜ್ ಧರೆಗುಡ್ಡೆಯವರನ್ನು ಸುಳ್ಳು ಮೊಕದ್ದಮೆಯಡಿಯಲ್ಲಿ ಬಂಧಿಸಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ ಎಂದು ಹೇಳಿದರು.

 

 

ಪೋಲಿಸ್ ಇಲಾಖೆಯು ಕಾನೂನನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಇದು ನಿಖರವಾಗಿ ಸಂವಿಧಾನದ ಧರ್ಮನಿರಪೇಕ್ಷ ತತ್ವಗಳಿಗೆ ವಿರುದ್ಧವಾಗಿದೆ,ಎಂದು ಪ್ರಕಟಣೆಯಲ್ಲಿ ಹೇಳಿದರು.

 

ಜುಲೈ 7ಕ್ಕೆ ಏಕ ಕಾಲದಲ್ಲಿ ಪುತ್ತೂರು,ಮೂಡಬಿದ್ರೆ, ಮಂಗಳೂರು,ಉಡುಪಿ, ಕುಂದಾಪುರ ಎಂಬಂತೆ ಈ ಐದು ಕೇಂದ್ರಗಳಲ್ಲಿ ಜುಲೈ 7ರಂದು ಸಂಜೆ 4 ಗಂಟೆಗೆ ಸಭೆಗಳು ನಡೆಯಲಿದ್ದು, ಸಂಘಟನೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.