ಅಯ್ಯಪ್ಪ ಮಾಲಾಧಾರಿಗಳಿಗೆ ಶುಭಸುದ್ದಿ ನೀಡಿದ ಕೆಎಸ್ಆರ್ ಟಿಸಿ....!! ಇನ್ಮುಂದೆ ಶಬರಿಮಲೆಗೆ ಹೋಗಲು ತುಂಬಾ ಸುಲಭ...!!

  • 15 Nov 2024 07:23:36 AM

ರಿಪಬ್ಲಿಕ್ ಹಿಂದೂ:- ಅಯ್ಯಪ್ಪ ಸ್ವಾಮಿಯ ವೃತಧಾರಿಗಳು ವರ್ಷಕ್ಕೊಮ್ಮೆಯಾದರೂ ಶಬರಿಮಲೆಗೆ ತೆರಳಿ ಅಲ್ಲಿ ಸ್ವಾಮಿಯ ದರ್ಶನ ಪಡೆದುಕೊಳ್ಳುವುದು ವಾಡಿಕೆ. ಹಿಂದೂ ಧರ್ಮದಲ್ಲಿ ಪುರುಷರು  ಮಾಲಾಧಾರಿಗಳಾಗಿ ಕಠಿಣ ವೃತಗಳನ್ನು ಆಚರಿಸುವ ಈ ಸಂಪ್ರದಾಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಾರೆ. ಹೀಗಿರುವಾಗ ಮೊದಲೆಲ್ಲ ಅವರಿಗೆ ಶಬರಿಮಲೆಗೆ ತೆರಳಲು ವಾಹನದ ವ್ಯವಸ್ಥೆ ಸಮರ್ಪಕವಾಗಿರದೆ ಕಷ್ಟವಾಗುತ್ತಿತ್ತು. ಆದರೆ ಈಗ ಕೆಲವರು ಬಸ್, ರೈಲು ಅಥವಾ ಪಾದಯಾತ್ರೆಯ ಮೂಲಕ ಕೂಡಾ  ಹೋಗುತ್ತಾರೆ. ಇದೀಗ ಶಬರಿಮಲೆಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ ಒಂದು ಕೇಳಿಬಂದಿದೆ. 

*ಅಯ್ಯಪ್ಪ ಭಕ್ತರಿಗೆ ಕೆಎಸ್ಆರ್ಟಿಸಿಯಿಂದ ಗುಡ್ ನ್ಯೂಸ್...!*

ಇನ್ಮುಂದೆ ಶಬರಿಮಲೆಗೆ ತೆರಳುವಾಗ ಪ್ರಯಾಣದ ಚಿಂತೆಯಿಲ್ಲ. ಆರಾಮವಾಗಿ ಸಂಚರಿಸಬಹುದು. ಬೆಂಗಳೂರಿನಿಂದ ಶಬರಿಮಲೆಗೆ ಕೆಎಸ್ಆರ್ಟಿಸಿ ವೋಲ್ವೋ ಬಸ್ ಬಿಡುವ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಕೈಗೆಟಕುವ ದರದಲ್ಲಿ ಮತ್ತು ಅತ್ಯಂತ ಆರಾಮವಾಗಿ ಭಕ್ತಾದಿಗಳು ಪ್ರಯಾಣ ಬೆಳೆಸುವ ಸದುದ್ದೇಶದಿಂದ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. 

*ಈ ವ್ಯವಸ್ಥೆ ಯಾವಾಗದಿಂದ ಆರಂಭ...?*

ಈ ನೂತನ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ. ನವೆಂಬರ್‌ 29 ರಿಂದ ಬೆಂಗಳೂರಿನಿಂದ ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಇದು ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ. ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಪ್ರಯಾಣ ಕೈಗೊಳ್ಳಲು ಶಬರಿಮಲೆಗೆ ತೆರಳುವ ಭಕ್ತಾದಿಗಳು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು.