ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಪುತ್ತೂರಿನ ಅಂಬುಲೆನ್ಸ್ ವಾಹನ ಮತ್ತೆ ಸೇವೆಗೆ ಸಿದ್ದ!

  • 08 Jul 2025 04:06:48 PM


ಪುತ್ತೂರು, ಈಶ್ವರಮಂಗಲ: ಕೆಲವೊಂದು ತಾಂತ್ರಿಕ ದೋಷಗಳ ಕಾರಣದಿಂದಾಗಿ ಕೆಲವು ದಿನಗಳಿಂದ ಸೇವೆಗೆ ಲಭ್ಯವಿರದ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ, ಪುತ್ತೂರು ಶಾಖೆಯ ಅಂಬುಲೆನ್ಸ್, ಇದೀಗ ಸಂಪೂರ್ಣವಾಗಿ ದುರಸ್ತಿಗೊಂಡಿದ್ದು, ಪುನಃ ಸಾರ್ವಜನಿಕ ಸೇವೆಗೆ ಸಜ್ಜಾಗಿದೆ ಎಂಬುದಾಗಿ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

 

ಇಂದಿನಿಂದಲೇ 24/7 ಅಂಬುಲೆನ್ಸ್ ಸೇವೆ ಲಭ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಜನತೆ ಈ ಸೇವೆಯನ್ನ ಬಳಸಿಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.