ಉಡುಪಿ: ಕೆಮ್ಮಾಲೆ ಗ್ರೂಪ್‌ನ ಪ್ರಖ್ಯಾತ ಉದ್ಯಮಿ ರಾಘವೇಂದ್ರ ಕುಂದರ್ (48) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಕೆಲಸದ ಸ್ಥಳದಲ್ಲೇ ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರು ನಿಧನರಾಗಿದ್ದಾರೆ.
ಬಹುಮುಖ ಪ್ರತಿಭಾಶಾಲಿಯಾಗಿದ್ದ ರಾಘವೇಂದ್ರ ಕುಂದರ್ ಅವರು ಕೆಮ್ಮಾಲೆ ಗ್ರೂಪ್, ಬೇಕ್ ಸ್ಟುಡಿಯೋ, ಫಿಶ್ ಫ್ಯಾಕ್ಟರಿ (ಸೀಫುಡ್ ರೆಸ್ಟೋರೆಂಟ್) ಮತ್ತು ಕೆಮ್ಮಾಲೆ ಕನ್‌ಸ್ಟ್ರಕ್ಷನ್ಸ್ ಎಂಬುದು ಅವರ ನೇತೃತ್ವದ ಪ್ರಮುಖ ಬ್ರಾಂಡ್ಗಳಾಗಿವೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ಉದ್ಯಮವಲಯ ಹಾಗೂ ಸ್ನೇಹಿತವೃತ್ತದಲ್ಲಿ ಶೋಕದ ಛಾಯೆ ಮೂಡಿಸಿದೆ.