ಕಡಬ:ಮನೆಗೆಲಸದ ಮಹಿಳೆಗೆ ಅನ್ಯಮತೀಯ ಉದ್ಯಮಿಯಿಂದ ಲೈಂಗಿಕ ಕಿರುಕುಳ;ಕಾಮುಕನ ಮೇಲೆ ದಾಖಲಾಯ್ತು ಕೇಸ್!

  • 15 Nov 2024 12:16:23 PM

ಕಡಬ:ನಾಗರಿಕ ಸಮಾಜದಲ್ಲಿ ನಿರಂತರವಾಗಿ ಹಿಂದೂ ಮಹಿಳೆಯರು ಹಾಗೂ ಯುವತಿಯರ ಮೇಲೆ ಪರಧರ್ಮಿಯರ ಲೈಂಗಿಕ ಕಿರುಕುಳ ಎಲ್ಲೆ ಮೀರುತ್ತಿದೆ. ಪ್ರತಿನಿತ್ಯ ಹಿಂದೂ ಮಹಿಳಾ ಸಮಾಜವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುವ ಕಾಮುಖರ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ, ಅನ್ಯಮತೀಯ ಉದ್ಯಮಿಯಾಗಿರುವ ಕಡಬ ಮೂಲದ ಕಾಮುಕನೊಬ್ಬ ಮನೆಗೆಲಸದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

*ಏನಿದು ಪ್ರಕರಣ...?*

ನೆಲ್ಯಾಡಿಯ ಅನ್ಯಮತೀಯ ಉದ್ಯಮಿಯೊಬ್ಬ ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬದ ಶಿಬಾಜೆ ಗ್ರಾಮದ ಆಕೋಟಿಪಾಲ್ ನಿವಾಸಿ ಉದ್ಯಮಿ ಎ.ಸಿ ಕುರಿಯನ್ ಎಂಬಾತನಾಗಿದ್ದಾನೆ ಮೂಲ ಆರೋಪಿ. ಸಂತ್ರಸ್ತ ಮಹಿಳೆ ತನ್ನ ಪತಿ ವಿಶ್ವನಾಥ ಅವರ ಜೊತೆ  ನಾಲ್ಕು ವರ್ಷದ ಹಿಂದೆ ಎ.ಸಿ ಕುರಿಯನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಅವರ ರೂಮಿಗೆ ಚಾ ತಿಂಡಿ ನೀಡಲು ಹೋದಾಗ ಅವರು ಅಸಭ್ಯವಾಗಿ ವರ್ತಿಸಿದ್ದಾರೆ, ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

*ದ್ವೇಷಕ್ಕೆ ಸಂತ್ರಸ್ತೆ ಹೆತ್ತವರು ವಾಸ್ತವ್ಯವಿದ್ದ ಮನೆ ಧ್ವಂಸ...!*

ಈ ಘಟನೆಯಿಂದ ಬೇಸತ್ತು ಮಹಿಳೆ ಕೆಲಸ ಬಿಟ್ಟು ಬಂದಿದ್ದಾರೆ. ಈ ವೇಳೆ ಕಾಮದಾಹ ತೀರಿಸಲು ಸಾಧ್ಯವಾಗದೆ ಉದ್ವಿಗ್ನನಾದ ಕುರಿಯನ್ ನಿನ್ನನ್ನು ಈ ಭೂಮಿಯಲ್ಲಿ ಇರಲು ಬಿಡೋದೇ ಇಲ್ಲ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಕೆಯ ಮೇಲಿನ ಕೋಪ, ದ್ವೇಷದಿಂದ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ವಾಸವಿದ್ದ ಏನೂ ತಿಳಿಯದ ಆಕೆಯ ಹೆತ್ತವರ ಮನೆಯನ್ನು ಕಡಬ ತಹಶೀಲ್ದಾರ್, ಕಡಬ ಮೆಸ್ಕಾಂ,  ಪೊಲೀಸರ ಸಮ್ಮುಖದಲ್ಲಿ ಜೆಸಿಬಿ ಮುಖಾಂತರ ಕೆಡವಲಾಗಿದೆ. ಈ ಕುರಿತು ಕೂಡಾ ಆರೋಪಿ ಕುರಿಯನ್ ಅವರ ಮೇಲೆ ಪ್ರಕರಣ ದಾಖಲಾಗಿದೆ.