ಪಡುಕರೆ: ಮೀನುಗಾರಿಕೆ ವೇಳೆ ದೋಣಿ ಮಗುಚಿ ಮೀನುಗಾರ ದಾರುಣ ಸಾವು!

  • 11 Jul 2025 03:52:40 PM


ಪಡುಕೆರೆ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿಬಿದ್ದು ಮೀನುಗಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

 

ಮೃತರನ್ನು ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ್ (48) ಎಂದು ಗುರುತಿಸಲಾಗಿದೆ. 

 

ಅವರು ಇತರ ಮೀನುಗಾರರೊಂದಿಗೆ ಸಮುದ್ರದಲ್ಲಿ ಬಲೆ ಬೀಸುತ್ತಿರುವ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಅಸ್ಥಿರವಾಗಿ ಮಗುಚಿಬಿದ್ದು, ನೀಲಾಧರ್ ಬಲೆ ಹಾಗೂ ದೋಣಿಯ ಆಡಿ ನಡುವೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

ನೀಲಾಧರ್ ಅವರ ಮೃತದೇಹವನ್ನು ಸಮುದ್ರದಿಂದ ಮೇಲಕ್ಕೆತ್ತಲಾಗಿದ್ದು, ಬಳಿಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

 

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರು ಹಾಗೂ ಸಹಮೀನುಗಾರರು ಈ ಘಟನೆಗೆ ಶೋಕ ವ್ಯಕ್ತಪಡಿಸಿದ್ದಾರೆ.