ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ ದುರಂತ: ಇಬ್ಬರು ಹಿರಿಯ ನಿರ್ವಾಹಕರು ಸಾವು

  • 12 Jul 2025 04:52:24 PM


ಸುರತ್ಕಲ್: ಎಂಆರ್‌ಪಿಎಲ್ ಟ್ಯಾಂಕ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಹಿರಿಯ ನಿರ್ವಾಹಕರು ಇಬ್ಬರು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. 

 

ಮೃತರನ್ನು ದೀಪ್ ಚಂದ್ರ (33), ಪ್ರಯಾಗ್‌ರಾಜ್(33) ಮತ್ತು ಬಿಜಿಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ರಕ್ಷಣೆಗೆ ಹೋಗಿದ್ದ ಗದಗದ ವಿನಾಯಕ್ ಎಂಬುವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

 

ಸಣ್ಣ ಪ್ರಮಾಣದ ಹೈಡ್ರೋಜನ್ ಸಲ್ಫೈಡ್ (H₂S) ಅನಿಲ ಸೋರಿಕೆ ಸಂಭವಿಸಿದ್ದು, ನಿಯಮಿತ ಪರಿಶೀಲನೆ ವೇಳೆ ಅವರು ಪ್ರಜ್ಞಾಹೀನ ಸ್ಥಿತಿಗೆ ಬಂದು e ಘಟನೆ ಸಂಭವಿಸಿದೆ ಎನ್ನಲಾಗಿದೆ.

 

 ಎಂಆರ್‌ಪಿಎಲ್ ಅಗ್ನಿಶಾಮಕ ಹಾಗೂ ಸುರಕ್ಷತಾ ತಂಡ ತಕ್ಷಣವೇ ಸೋರಿಕೆಯನ್ನು ನಿಯಂತ್ರಿಸಿದೆ. ಮತ್ತು ಘಟನೆಯ ಕುರಿತು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ. ಸಂಬಂಧಿತ ಇಲಾಖೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.