ಕಾಸರಗೋಡು: ಪೆರ್ಲ ಎಣ್ಮಕಜೆ ಪಂಚಾಯತ್‌ನ ಸಾಯ ವಾರ್ಡ್, ಎರುಗಲ್ಲು ಪ್ರದೇಶದಲ್ಲಿ ನಿನ್ನೆ ರಾತ್ರಿ 7 ಗಂಟೆಗೆ ಸಿಡಿಲು ಬಡಿದು ಉದಯ ಶಂಕರ ಮೂಲ್ಯ ಅವರ ಮನೆಯು ಹಾನಿಗೊಳಗಾಯಿತು.
ಸಿಡಿಲಿನ ತೀವ್ರತೆಯು ಮನೆಗೆ ಗಂಭೀರ ಬಿರುಕನ್ನುಂಟು ಮಾಡಿದೆ . ಭಾಗ್ಯವಶಾತ್ ಮನೆಯಲ್ಲಿರುವ ಇಬ್ಬರು ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.