ನೆಟ್ಲ ಮೂಡ್ನೂರಿನಲ್ಲಿ ಶಾಸಕರಿಗೆ ಆದರದ ಆತಿಥ್ಯ; ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಆತ್ಮೀಯ ಭೋಜನ ಸವಿದ ಶಾಸಕರು!

  • 16 Jul 2025 12:23:00 PM


ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಬೊಟ್ಯಾಡಿ ಅವರು ಇಂದು ನೆಟ್ಲ ಮೂಡ್ನೂರು ಗ್ರಾಮಕ್ಕೆ ಆಗಮಿಸಿ ನೇರಳಕಟ್ಟೆ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

 

ನಂತರ ಕಾರ್ಯಕರ್ತರೊಂದಿಗೆ ಉಭಯ ಕುಶಲೋಪಚಾರ ನಡೆಸಿ ಬಹಳ ಸಮಯ ಅವರೊಂದಿಗೆ ಬೆರೆತರು.

 

 

 

ನೆಟ್ಲ ಮಡ್ನೂರು ಗ್ರಾಮದ ಶಕ್ತಿ ಕೇಂದ್ರ ಪ್ರಮುಖ ಶ್ರೀ ಧನಂಜಯ ಅವರ ಮೀನಾವಿನ ಮನೆಗೆ ಶಾಸಕರು ಭೇಟಿ ನೀಡಿ ಮಧ್ಯಾಹ್ನದ ಊಟವನ್ನು ಅಲ್ಲಿಯೇ ಸವಿದರು.

 

 ವಿವಿಧ ಬಗೆಯ ಖಾದ್ಯಗಳು, ಪಲ್ಯ, ಪಾಯಸವನ್ನು ಶ್ರೀಮತಿ ಲತಾ ಧನಂಜಯ, ಶ್ರೀಮತಿ ಮಮತಾ, ಶ್ರೀಮತಿ ಸೌಮ್ಯ ಹರೀಶ್, ಹಾಗೂ ಶ್ರೀಮತಿ ವಿಜಯ ಪ್ರೀತಿಯಿಂದ ಬಡಿಸಿದರು.

 

ಮನೆಯವರಿಗೆ ಹಾಗೂ ಸಾರ್ವಜನಿಕರಿಗೆ ಶಾಸಕರಿಗೆ ಆತ್ಮೀಯವಾಗಿ ಸ್ವಾಗತಿಸಿದ ದೃಶ್ಯ ಈ ಸಂದರ್ಭದಲ್ಲಿ ಗಮನ ಸೆಳೆಯಿತು. 

 

 

ಪಕ್ಷದ ಪರವಾಗಿ ಶಾಸಕರಿಗೆ ಹಾಗೂ ಉಪಸ್ಥಿತರಿದ್ದ ಗಣ್ಯರಿಗೆ ಗೌರವದ ಸ್ವಾಗತ ನೀಡಲಾಯಿತು.

 

ಈ ಸಂದರ್ಭದಲ್ಲಿ ಮಾಣಿ ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ, ನೆರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಪುಷ್ಪರಾಜ್ ಚೌಟ, ಉಪಾಧ್ಯಕ್ಷ ಶ್ರೀ ತನಿಯಪ್ಪ ಗೌಡ, ಪಂಚಾಯತ್ ಸದಸ್ಯರು ಹಾಗೂ ಸೊಸೈಟಿ ನಿರ್ದೇಶಕರಾದ ಶ್ರೀ ಅಶೋಕ್ ರೈ, ಶ್ರೀಮತಿ ಶಕೀಲಾ ಕೃಷ್ಣ, ಎಸ್‌ಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಗೋಪಾಲ ಕಾರಾಗುಡ್ಡ, ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಸುಜಾತಾ, ಶ್ರೀಮತಿ ಶಾಲಿನಿ, ಹಿರಿಯರಾದ ಶ್ರೀ ಮೋನಪ್ಪ ಗೌಡ, ಶ್ರೀಮತಿ ತಿಮ್ಮಕ್ಕ ಹಾಗೂ ಪ್ರಮುಖರಾದ ಶ್ರೀ ಜೀವನ, ಶ್ರೀ ರುಕ್ಮ ಗೌಡ, ಶ್ರೀ ಹರೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.