ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಓಟೆಪಡು ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳದಿಂದ ಸ್ಥಳದ ಕೊರತೆಯನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ನೂತನ ಮಂದಿರ ನಿರ್ಮಾಣಕ್ಕೆ ಪ್ರಾರಂಭವಾಯಿತು.
ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರ ಸಹಕಾರವನ್ನು ಕೋರಲಾಗಿದೆ.
ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ತಾಂಬೂಲ ಪ್ರಶ್ನೆ, ಸುದರ್ಶನ ಹೋಮ, ದುರ್ಗಾಪೂಜೆ ಮುಂತಾದ ಶುದ್ಧೀಕರಣ ಕಾರ್ಯಗಳು ನಡೆಸಲಾಯಿತು.
ನಂತರ ವಾಸ್ತು ತಜ್ಞರಿಂದ ನಕ್ಷೆ ರೂಪಿಸಿ, ಭಜನಾ ಮಂದಿರದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಬಾಲಾಲಯ ನಿರ್ಮಿಸಿ ಸೇವೆ ಮುಂದುವರಿಸಲಾಗುತ್ತಿದೆ.
ಈ ಪುಣ್ಯ ಕಾರ್ಯಕ್ಕೆ ಊರ ಮತ್ತು ಪರವೂರ ಭಕ್ತರು ಕೈಜೋಡಿಸಲು ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿ (ರಿ.)” ಹಾಗೂ “ಶ್ರೀ ಸತ್ಯನಾರಾಯಣ ಭಜನಾ ಮಂಡಳಿ” ಮನಃಪೂರ್ವಕ ಸಹಕಾರ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
BANK A/C DETAILS:
KARNATAKA BANK-MANILA BRANCH
IFSC CODE-KARB0000502
A/C NO. 5022000100004201
SHRI SATYANARAYANA BHAJANA MANDALI
ವಿ.ಸೂ. : ಮಂದಿರ ನಿರ್ಮಾಣಕ್ಕೆ ಸಹಾಯಧನ ನೀಡುವವರು ಕರ್ನಾಟಕ ಬ್ಯಾಂಕ್ ಮುರುವ ಶಾಖೆಯ SB A/c ಇದಕ್ಕೆ ಕಳುಹಿಸಿ ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಬೇಖಾಗಿ ವಿನಂತಿ.
ದೂರವಾಣಿ ಸಂಖ್ಯೆಗಳು :
7034079512 | 7022436709
sbmotrust@gmail.com