ಉಡುಪಿ: ಗಂಗೊಳ್ಳಿ ನಾಡ ದೋಣಿ ದುರಂತ: ನಾಪತ್ತೆಯಾದ ಮೂರು ಮೀನುಗಾರರ ಮೃತದೇಹ ಪತ್ತೆ!

  • 17 Jul 2025 03:34:06 PM


ಉಡುಪಿ : ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಜುಲೈ 15 ರಂದು ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಮೃತದೇಹಗಳು ಕಾರ್ಯಾಚರಣೆಯಿಂದ ಪತ್ತೆಯಾಗಿವೆ.

 

ನಾಲ್ವರು ಮೀನುಗಾರರು ಜುಲೈ 15ರ ಬೆಳಿಗ್ಗೆ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಿರುಸಿನ ಅಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದ ಘಟನೆ ನಡೆದಿದ್ದು, ಈ ವೇಳೆ ಓರ್ವ ಮೀನುಗಾರನನ್ನು ಸಮೀಪದ ಇತರ ದೋಣಿಗಳ ಸಹಾಯದಿಂದ ರಕ್ಷಿಸಲಾಯಿತಾದರೂ, ಉಳಿದ ಮೂವರು ನಾಪತ್ತೆಯಾಗಿದ್ದರು.

 

ಜುಲೈ 16 ರಂದು ಬೆಳಿಗ್ಗೆ ಲೋಹಿತ್ ಖಾರ್ವಿ(38) ಅವರ ಮೃತದೇಹ ಕೊಡಿ ಲೈಟ್‌ಹೌಸ್ ಬಳಿ ಪತ್ತೆ ಹಂಚಲಾಯಿತು. ಇದೇ ದಿನ ಸಂಜೆ ಜಗನ್ನಾಥ್ ಖಾರ್ವಿ(50) ಅವರ ಮೃತದೇಹ ಕೊಡಿ ಬೀಚ್ ಕಿನಾರೆಯಲ್ಲಿಂದು ಕಂಡುಬಂದಿತು.

 

 ಇಂದು ಬೆಳಿಗ್ಗೆ ಕಾಣೆಯಾಗಿದ್ದ ಇನ್ನೊಬ್ಬ ಮೀನುಗಾರ ಸುರೇಶ್ ಖಾರ್ವಿ (48)ಅವರ ಮೃತದೇಹ ಕೊಡಿ ಸೀ ವಾಕ್ ಬಳಿ ಪತ್ತೆಯಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.