ಮಂಗಳೂರು: ಮರೋಳಿ ವಾರ್ಡ್ ನಲ್ಲಿ ಮಳೆಗೆ ಕಾಂಪೌಂಡ್ ಕುಸಿತ; ಮನೆಗಳಿಗೆ ಅಪಾಯ! ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ತ್ವರಿತ ಸುರಕ್ಷತಾ ಕ್ರಮಕ್ಕೆ ಸೂಚನೆ

  • 18 Jul 2025 05:49:57 PM


ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳಿಯಿಂದ ಅನೇಕ ಪ್ರಾಕೃತಿಕ ಅನಾಹುತಗಳು ಸಂಭವಿಸಿದ್ದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರೋಳಿ ವಾರ್ಡ್ ಸಂಖ್ಯೆ 37 ರಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

 

ಅಡುಮರೋಳಿ ಪ್ರದೇಶದಲ್ಲಿ, ಶೋಭಾ ಶೆಟ್ಟಿ ಎಂಬವರ ಮನೆಯ ಎತ್ತರದ ಕಾಂಪೌಂಡ್ ಅತಿಯಾದ ಮಳೆಗೆ ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ.

 

ಅಲ್ಲದೇ ಪಾಂಪು ಮನೆ , ಸುಶಾಂತ್ ಪೂಜಾರಿ ಮತ್ತು ಮಹಾಬಲ ಎಂಬವರ ಮನೆಗಳ ಹಿಂಭಾಗದ ಗುಡ್ಡ ಕುಸಿತದಿಂದ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ.

 

  ಆದ್ದರಿಂದ ಮನೆಯವರಿಗೆ ಯಾವುದೇ ರೀತಿಯ ಹಾನಿ ಆಗದಂತೆ ತಕ್ಷಣ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

 

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಶಾಂತ್ ಮರೋಳಿ, ಜಗದೀಶ್ ಶೆಣೈ, ಜಗನ್ನಾಥ ದೊಡ್ಡಮನೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.