ಸುಳ್ಯ: ಸಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಅಕ್ರಮ ಹಣ ವಸೂಲಿ ಮತ್ತು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸುಳ್ಯ ಘಟಕದ ವತಿಯಿಂದ ತಾಲೂಕು ಕಚೇರಿ ಎದುರು ರಾಜ್ಯ ಮಟ್ಟದ ತೀವ್ರ ಪ್ರತಿಭಟನೆ ನಡೆಯಿತು.
ABVP ತಾಲೂಕು ಸಂಚಾಲಕರಾದ ನಂದನ್ ಪವಿತ್ರಮಜಲು ಅವರು ವಿದ್ಯಾರ್ಥಿಗಳು ಎದುರಿಸುತ್ತಿರುವ ತೀವ್ರ ಒತ್ತಡ, ಗೊಂದಲ ಮತ್ತು ಅನ್ಯಾಯದ ಕುರಿತು ಕಿಡಿಕಾರಿದರು. ಈ ರೀತಿಯ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸಬೇಕೆಂದು ಒತ್ತಾಯಿಸಿದರು.
ABVP ಈ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾತ್ರವೇ ಎಂಬುವುದನ್ನು ಮುಳಿಯ ಸ್ವಾತಿಕ್ ಅವರು ಸ್ಪಷ್ಟಪಡಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ನ್ಯಾಯ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶವಿದೆ ಎಂಬುದಾಗಿಯೂ ಅವರು ವಿವರಿಸಿ ಹೇಳಿದರು.
ಹೋರಾಟದಲ್ಲಿ ABVP ಕಾರ್ಯಕರ್ತರಾದ ಹರ್ಷ, ನಮೃತ್, ಪ್ರಣ್ವಿತ್, ಜೀವನ್, ಶ್ರೀಶರಣ್, ಧನುಷ್, ವಿನಿತ್, ಅಮಿತ್, ದರ್ಶನ್, ಪುನೀತ್, ಕುಸುಮಾಧರ್, ನಿತೇಶ್, ಗಗನ್ ಮತ್ತು ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ದೃಢ ಬೆಂಬಲವನ್ನು ತೋರಿದರು.
ABVP ಸಂಸ್ಥೆ ಈ ಸಮಸ್ಯೆಗಳ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಲು ಬದ್ಧವಾಗಿದೆ. ವಿದ್ಯಾರ್ಥಿಗಳ ಹಕ್ಕುಗಳಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿlla ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.