ಬಂಟ್ವಾಳ: ಮೂಡನಡುಗೋಡು ಗ್ರಾಮದ ಬಾಬತೋಟದಲ್ಲಿ ಚಿರತೆಯ ಹಾವಳಿ: ನಾಯಿಗಳ ಮೇಲೆ ದಾಳಿ ಯತ್ನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ!

  • 21 Jul 2025 02:35:34 PM


ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಬಾಬತೋಟದಲ್ಲಿ ಚಿರತೆಯೊಂದು ಮನೆ ಆವರಣಕ್ಕೆ ನುಗ್ಗಿ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ. 

 

ಈ ಘಟನೆಯು ಜುಲೈ 17ರಂದು ರಾತ್ರಿ 11:30ಕ್ಕೆ ಪ್ರಕಾಶ್ ಪೂಜಾರಿ ಅವರ ಮನೆಯಲ್ಲಿ ನಡೆದಿದ್ದು ಚಿರತೆಯು ನುಗ್ಗಿದ ವೇಳೆ ಮನೆಯಲ್ಲಿದ್ದ ನಾಯಿಗಳು ಜೋರಾಗಿ ಬೊಗಳಿದ ಕಾರಣ ಚಿರತೆ ಓಡಿ ಹೋದ ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುತ್ತದೆ.

 

ಆದರೆ ಮನೆಯಲ್ಲಿ ಇನ್‌ಸ್ಟಾಲ್ ಮಾಡಿದ್ದ ಮಾನಿಟರ್ ಹಾಳಾಗಿದ್ದರಿಂದ ಕಾರಣ ಈ ವಿಷಯ ಬಳಿಕವೇ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

 

ಮನೆ ಸದಸ್ಯರು ಪ್ರಾರಂಭದಲ್ಲಿ ಯಾರೋ ಒಳನುಗ್ಗಲು ಯತ್ನಿಸಿದ್ದಾರೆಂದು ಶಂಕಿಸಿದ್ದರು. ಆದರೆ ಚಿರತೆಯ ದಾಳಿ ಹಿನ್ನೆಲೆ ನಾಯಿಗೆ ಗಾಯಗೊಂಡಿದ್ದು, ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೆಂದೂ ಅವರು ಪಟಾಕಿ ಸಿಡಿಸಿ ಓಡಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.