ಮಂಗಳೂರು: ಮಂಗಳೂರಿನ ಹೋಟೆಲ್ ಉದ್ಯಮ ಸೇರಿದಂತೆ ಇನ್ನೂ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ ಯುವ ಉದ್ಯಮಿ ನಿತಿನ್ ಸುವರ್ಣ ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರು ಹಲವು ಮಾತ್ರೆಗಳನ್ನು ಸೇವಿಸಿದ್ದಾಗಿ ತಿಳಿದುಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಮೂಲತಃ ಮರೋಳಿಯ ನಿವಾಸಿಯಾಗಿರುವ ನಿತಿನ್, ಮಣ್ಣಗುಡ್ಡದ ಗುಂಡೂರಾವ್ ಲೇನ್‌ನಲ್ಲಿರುವ ಫ್ಲಾಟ್‌ನಲ್ಲಿ ತಾಯಿಯ ಜೊತೆಗೆ ವಾಸವಾಗಿದ್ದರು.
ಈ ಘಟನೆ ಕುರಿತು ಮಾಹಿತಿ ಪಡೆದ ಬರ್ಕೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರಿಸಲಾಗಿದೆ.