ಬದಿಯಡ್ಕ: ಡಿವೈಎಫ್ಐ ನಾಯಕಿ ಸಚಿತಾ ರೈಯಿಂದ ಉದ್ಯೋಗ ಕೊಡಿಸುವ ಭರವಸೆ ಪಡೆದು 15ಲಕ್ಷ ರೂ ಕಳಕೊಂಡು ವಂಚಿರಾಗಿ ಬಳಿಕ ಮನನೊಂದು ಆತ್ಮಹತ್ಯೆಗೈದ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷರ ಪತ್ನಿ ಸರೋಜಿನಿ(50) ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಯ ಹಿನ್ನೆಲೆಯಲ್ಲಿ ಪೋಲೀಸರು ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಅಭಿಪ್ರಾಯಪಟ್ಟಿದೆ.
ಬಿಜೆಪಿ ನಾಯಕರ ಬಳಗ ಇಂದು ಬೆಳಿಗ್ಗೆ ಆತ್ಮಹತ್ಯೆಗೈದ ಸರೋಜಿನಿ ಅವರ ಮನೆ ಸಂದರ್ಶಿಸಿದರು. ಪ್ರಕರಣದಲ್ಲಿ ವಂಚನೆ ಎಸಗಿ, ಗೃಹಿಣಿಯ ಮನನೋಯಿಸಿದ ಸಚಿತಾ ರೈ ವಿರುದ್ಧ ಆತ್ಮಹತ್ಯಾ ಪ್ರಚೋದನೆಯ ನರ ಹತ್ಯಾ ಕೇಸು ದಾಖಲಿಸಬೇಕೆಂದು ಹೇಳಿದ್ದಾರೆ. ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳು ಈ ಸಂಬಂಧ ಹೇಳಿಕೆ ನೀಡಿದ್ದು ಈ ಪ್ರಕರಣದಲ್ಲಿ ಆತ್ಮಹತ್ಯೆ ಪ್ರೇರಣೆಯ ಪ್ರಕರಣದ ಮಾತ್ರವಲ್ಲದೆ, ವಂಚನೆಗೊಳಗಾದ ಮತ್ತು ಆತ್ಮಹತ್ಯೆ ಮಾಡಿಕೊಂಡ ಸರೋಜಿನಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪೋಲೀಸರಿಗೆ ಒತ್ತಾಯಿಸಿದ್ದಾರೆ.
ಮೃತರ ಹಿರಿಯ ಪುತ್ರಿ ಅಮೃತಾಳಿಗೆ ಕಾಸರಗೋಡಿನ ಸಿ ಪಿ ಸಿ ಆರ್ ಐ ನಲ್ಲಿ ಉದ್ಯೋಗದ ಭರವಸೆಯಿತ್ತು 15 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಡವರಾದ ಇವರು ಉದ್ಯೋಗದ ಕನಸಿನಲ್ಲಿ ಹಾಗೋ ಹೀಗೋ ಹಣ ಹೊಂದಿಸಿ ಕೊಟ್ಟು ಮೋಸ ಹೋದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎಂ, ಪ್ರ.ಕಾರ್ಯದರ್ಶಿ ರವೀಂದ್ರ ಗೋಸಾಡ, ಪಿ.ಆರ್. ಸುನಿಲ್, ಬದಿಯಡ್ಕ ವಲಯ ಪ್ರ.ಕಾರ್ಯದರ್ಶಿ ಅವಿನಾಶ್ ರೈ,.ಆರೆಸ್ಸೆಸ್ ನ ಪ್ರಸಾದ್ ಓಂತಿಚ್ಚಾಲು, ವಾರ್ಡು ಸದಸ್ಯ ಈಶ್ವರ ಮಾಸ್ಟರ್ ಮೊದಲಾದವರು ಮೃತರ ಮನೆಗೆ ತೆರಳಿ ಕುಟುಂಬವನ್ನು ಸಂತೈಸಿದರು.
ಈ ಆತ್ಮಹತ್ಯಾ ಪ್ರೇರಣೆ ಪ್ರಕರಣದ ಮೇಲೆ ಸಚಿತ ರೈ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.