ಮಾಸ್ಕೋ: ಚೀನಾ ಗಡಿಯಲ್ಲಿ ರಷ್ಯಾದ (An-24) ವಿಮಾನ ಪತನ: ಐದು ಮಕ್ಕಳು ಸೇರಿದಂತೆ 49 ಮಂದಿ ಸಾವು??

  • 24 Jul 2025 03:03:00 PM


ಮಾಸ್ಕೊ: ಚೀನಾದ ಗಡಿಯಲ್ಲಿ ರಷ್ಯಾದ ಆಂಟೊನೊವ್-24 (An-24) ವಿಮಾನ ಪತನಗೊಂಡ ಘಟನೆ ನಡೆದಿದ್ದು, ಐದು ಮಕ್ಕಳು ಸೇರಿ 49 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

 

 ಈ ವಿಮಾನವು ಸೈಬೀರಿಯಾ ಮೂಲದ ಅಂಗಾರ ಏರ್‌ಲೈನ್ಸ್‌ಗೆ ಸೇರಿದ್ದು, ರಷ್ಯಾ-ಚೀನಾದ ಗಡಿಯ ಬ್ಲಾಗೊವೆಶ್‌ಚೆನ್ಸ್ಕ್ ನಗರದಿಂದ ಟಿಂಡಾ ಕಡೆಗೆ ಹೊರಟಿತ್ತು.

 

 ಪ್ರಯಾಣದ ಮಧ್ಯದಲ್ಲಿ ಸಂಪರ್ಕ ಕಡಿದಾಗಿದ್ದು, ನಂತರ ಟಿಂಡಾ ನಗರದ 15 ಕಿಮೀ ದೂರದ ಇಳಿಜಾರಿನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

 

ವಿಮಾನದಲ್ಲಿ 43 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ತಿಳಿಸಿದ್ದಾರೆ.

 

ವಿಮಾನದಲ್ಲಿದ್ದ ಎಲ್ಲಾ 50 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ ತಿಳಿಸಿದೆ. ಆದರೆ ಅಧಿಕೃತವಾಗಿ ಸಾವನ್ನಪ್ಪಿರುವುದರ ಕುರಿತಾಗಿ ಬಹಿರಂಗ ಪಡಿಸಲಿಲ್ಲ.

 

ಈ ನಡುವೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ರಕ್ಷಣಾ ಹೆಲಿಕಾಪ್ಟರ್‌ಗಳು ಪತ್ತೆಹಚ್ಚಿರುವುದಾಗಿ ರಷ್ಯಾದ ತುರ್ತು ಸಚಿವಾಲಯ ಹೇಳಿದೆ

 

 ಪತನದ ಸ್ಥಳದಲ್ಲಿ ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅವಶೇಷಗಳ ಪರಿಶೀಲನೆ ನಡೆಯುತ್ತಿದೆ.

 

 ಅಧಿಕಾರಿಗಳ ಪ್ರಕಾರ, ಘಟನೆಗೆ ಕಾರಣವಾದ ತಾಂತ್ರಿಕ ದೋಷ ಅಥವಾ ಹವಾಮಾನ ಪರಿಸ್ಥಿತಿ ಇವುಗಳ ಕುರಿತಾಗಿ ತನಿಖೆ ಮುಂದುವರಿದಿದೆ.