ಮಡಿಕೇರಿ: ಗಾಳಿಬೀಡು ಪ್ರದೇಶದಲ್ಲಿ ಭಾರೀ ಮಳೆ – ಹೊಳೆಯ ಬದಿಯ ನಿವಾಸಿಗಳಿಗೆ ಎಚ್ಚರಿಕೆ ಸೂಚನೆ

  • 27 Jul 2025 07:30:55 AM


ಮಡಿಕೇರಿ: ಗಾಳಿಬೀಡು, ಮಡಿಕೇರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯು ಸುರಿಯುತ್ತಿದ್ದು, ನದಿಗಳು ಹಾಗೂ ಹೊಳೆ ತುಂಬಿ ಹರಿಯುva ಪರಿಸ್ಥಿತಿ ಉಂಟಾಗಿದೆ. 

 

ಕಲ್ಮಕಾರು ಹೊಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆ, ಹೊಳೆಯ ತೀರದಲ್ಲಿ ವಾಸಿಸುವ ಜನತೆ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿಗಳಿಂದ ಎಚ್ಚರಿಕೆ ನೀಡಲಾಗಿದೆ.

 

ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ, ನದಿ ಹಾಗೂ ಹೊಳೆಯ ಹತ್ತಿರದ ಪ್ರದೇಶಗಳಲ್ಲಿನ ನಿವಾಸಿಗಳಿಗೆ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವ ಸೂಚನೆ ನೀಡಲಾಗಿದೆ.