ಕಲ್ಲಡ್ಕ : ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಘಟಕ, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ವತಿಯಿಂದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆಗಸ್ಟ್ 10, 2025 ರಂದು ವಾಹನ ಜಾಥಾ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಧ್ಯಾಹ್ನ 2:30ಕ್ಕೆ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಮೆಲ್ಕಾರು ರಾಮದೇವ ಸಭಾಭವನ ಮತ್ತು ವೀರಕೆಂಬ ಶಾರದಾ ಭಜನಾ ಮಂದಿರಗಳಿಂದ ಏಕಕಾಲಕ್ಕೆ ಜಾಥಾ ಆರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಸಂಜೆ 4 ಗಂಟೆಗೆ ಉಮಾಶಿವ ದೇವಸ್ಥಾನ, ಗೇರುಕಟ್ಟೆ, ಕಲ್ಲಡ್ಕದಲ್ಲಿ ನಡೆಸಲಾಗುವುದು.
ಈ ಜಾಥಾ ಹಾಗೂ ಸಭಾ ಕಾರ್ಯಕ್ರಮಕ್ಕೆ ಎಲ್ಲಾ ಹಿಂದೂ ಬಾಂಧವರಿಗೆ ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಘಟಕದ ಸಂಯೋಜಕರು, ಸಹಸಂಯೋಜಕರು ಮತ್ತು ಕಾರ್ಯಕಾರಿಣಿ ಸಮಿತಿಯವರು ಸ್ವಾಗತವನ್ನು ಕೋರಿದ್ದಾರೆ.