ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಅಶ್ವಿನಿಯವರು, ತನ್ನ ಗಂಡನಿಗಾಗಿ ಮಂಜೇಶ್ವರದಲ್ಲಿ *ಐಡಿಯಲ್ ಚಿಕನ್ ಸ್ಟಾಲ್* ನ್ನು *ಹಲಾಲ್* ಮುದ್ರಣದಲ್ಲಿ ತೆರೆದಿದ್ದಾರೆ. ಈ ಅಂಗಡಿಯನ್ನು ಮುಸ್ಲಿಂ ಲೀಗ್ ಶಾಸಕರಾದ ಎ ಕೆ ಎಮ್ ಅಶ್ರಫ್ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು.
ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಹಲಾಲ್ ಮುದ್ರಣದ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುತ್ತಾ, ಹಿಂದೂ ಹಬ್ಬಗಳ ಸಂದರ್ಭದಲ್ಲಿ ಶಬ್ದಮಟ್ಟವನ್ನು ಹೆಚ್ಚಿಸುತ್ತಿದ್ದ ವೇಳೆಯಲ್ಲಿ, ಮಂಜೇಶ್ವರದಲ್ಲಿ ಅಶ್ವಿನಿಯವರು ಹರ್ಷೋಲ್ಲಾಸದಿಂದ ಹಲಾಲ್ ಯುಕ್ತ ಕೋಳಿಮಾಂಸದ ಅಂಗಡಿಯ ಉದ್ಘಾಟನೆಯನ್ನು ನಡೆಸಿದರು. ಇದು ಅತೀ ನಾಚಿಕೆಗೇಡಿತನದ ವಿಷಯವೇ ಅಥವಾ ಒಳ ಒಪ್ಪಂದವೋ ಎಂಬುದರ ಬಗ್ಗೆ ಚರ್ಚೆ ಹುಟ್ಟಿಸಿತು. ಕೆಲವು ಸಮಾಜದವರು ಹಲಾಲ್‌ನಂತಹ ವಿಷಯಗಳಲ್ಲಿ ಹೋರಾಟಗಳನ್ನು ಹಮ್ಮಿಕೊಂಡು, ಹಿಂದೂ ಧಾರ್ಮಿಕ ತತ್ವಗಳಿಗೆ ಬದ್ಧರಾಗಿರುವಂತೆ ತೋರ್ಪಡಿಕೆ ಮುಖವಾಡವನ್ನು ಧರಿಸುತ್ತಾರೆ. ಅದಕ್ಕೆ ದ್ರಿಕ್ಷಾಶಿ ಯಾಗುವಂತಿದೆ ಅಶ್ವಿನಿಯವರ ನಡೆ. ಹಲವು ರಾಜಕೀಯ ನಾಯಕರು ಲಾಭಕ್ಕಾಗಿ ತಮ್ಮ ನಿಲುವುಗಳನ್ನು ಬದಲಿಸುತ್ತಾರೆ ಎಂಬ ಅಭಿಪ್ರಾಯವನ್ನು ಕೂಡ ಈ ಘಟನೆ ಪುಷ್ಟೀಕರಿಸುತ್ತಿದೆ.
ಹಲಾಲ್ ಮುದ್ರಿತ ಮಾಂಸದ ಅಂಗಡಿ ಮತ್ತು ಹಿಂದೂ ಕಾರ್ಯಕರ್ತರ ಅನುಪಸ್ಥಿತಿಯಲ್ಲಿ ಮುಸ್ಲಿಂ ಲೀಗ್ ಶಾಸಕರಿಂದ ಉದ್ಘಾಟನೆಯಂತಹ ವಿಷಯಗಳು, ಅಶ್ವಿನಿಯವರ ನಡೆಗೆ ಸವಾಲು ಎತ್ತುತ್ತಿವೆ. ಹೋರಾಟದ ಹೆಸರಿನಲ್ಲಿ ತನ್ನ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುವ ಈ ರೀತಿಯ ಡಬಲ್ ಸ್ಟ್ಯಾಂಡರ್ಡ್‌ಗಳು ಜನರ ಪ್ರಶ್ನೆಗಳ ಹುಟ್ಟಿಗೆ ಕಾರಣವನ್ನುಂಟು ಮಾಡುತ್ತಿದೆ.
*ಹಲಾಲ್ ಎಂಬುದು ಹಿಂದೂ ಧರ್ಮದ ಪದ್ದತಿ ಅಲ್ಲ* ಎಂದು ತಿಳಿದು ಅದರ ಮುದ್ರಣೆಯಲ್ಲಿ ಅಂಗಡಿ ಯಾಕೆ ??? ಎಂಬುದು ವಿವಾದಕ್ಕೆ ಮತ್ತಷ್ಟು ಕಾರಣವಾಯಿತು. ಈ ಹಿನ್ನೆಲೆಯಲ್ಲಿ, ಅಶ್ವಿನಿಯವರ ನಡೆ, ಹಿಂದೂ ಸಂಘಟನೆಗಳು ಮತ್ತು ರಾಜಕೀಯ ಪಕ್ಷದ ನಂಬಿಕೆಗಳಿಗೆ ಧಕ್ಕೆಯಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಹಿಂದೂ ಕಾರ್ಯಕರ್ತರಾದ ಅಡ್ವಾಕೇಟ್ ಸುಹಾಸ್,ಸಂದೀಪ್,ಉಪೇಂದ್ರ ಮುಂತಾದವರ ಕೊಲೆ ಪ್ರಕರಣದ ಹಿನ್ನಲೆಯಲ್ಲಿರುವ ಕಾಸರಗೋಡು ಜಿಲ್ಲೆಯ ಜಿಹಾದಿಗಳು. ಸಂಘಪರಿವಾರದ ವರ್ಗ ಶತ್ರು ಆಗಿರುವ ಮುಸ್ಲಿಂ ಲೀಗ್ ಪಕ್ಷದ ಜೊತೆಗಿನ ಒಪ್ಪಂದ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರ ಬಲವಾದ ಆರೋಪ