ಬೈಂದೂರು: ಮೇಯುತ್ತಿದ್ದ ದನ-ಕರುಗಳನ್ನು ಎಳೆದೊಯ್ದು ಗಾಡಿಗೆ ತುರುಕಿಸಿ ಸಾಗಾಟ ಮಾಡುವ ಅನ್ಯಕೋಮಿನವರ ದುಷ್ಕ್ರಮ ಇಂದು ನಿನ್ನೆಯದಲ್ಲ. ಅದೆಷ್ಟೋ ಅಕ್ರಮ ಗೋಸಾಗಾಟ ಪ್ರಕರಣಗಳನ್ನು ಹಿಂದೂ ಕಾರ್ಯಕರ್ತರೇ ಮುಂದೆ ನಿಂತು ಭೇಧಿಸಿದ್ದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿವೆ. ನಿರ್ದಾಕ್ಷಿಣ್ಯದಿಂದ ಗೋವುಗಳನ್ನು ಸಾಗಾಟ ಮಾಡಿ ಮಾಂಸದಂಧೆ ಮಾಡುವ ಪಾಪಿಗಳ ಕುಕೃತ್ಯಗಳು ಬಯಲಾಗುತ್ತಲೇ ಇದೆ. ಪೊಲೀಸರ ಕಣ್ಣಿಗೆ ಮಣ್ಣೆರಚಿ ನಿರಂತರವಾಗಿ ಗೋ ಸಾಗಾಟದ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಇದೀಗ ಅಂತಹದ್ದೇ ಹೊಸ ಸಂಚಿನಲ್ಲಿ ಹೂಡಿದ್ದ ಕೃತ್ಯ ಅಪಘಾತದಿಂದಾಗಿ ಬಯಲಿಗೆ ಬಂದಿದೆ.
*ಮೀನು ಸಾಗಾಟ ವಾಹನದಲ್ಲಿ ಇದ್ದದ್ದು ಮೀನಲ್ಲ, ಗೋವುಗಳು!*
ಅತಿಯಾದ ವೇಗದಿಂದ ಚಲಾಯಿಸುತ್ತ ಬರುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ವಾಹನ ಪಲ್ಟಿಯಾದ ಘಟನೆ ಶಿರೂರು ಕರಿಕಟ್ಟೆ ಹತ್ತಿರ ಸಂಭವಿಸಿದೆ. ಆದರೆ ಇದರಲ್ಲಿ ಮೀನಿನ ಬದಲು ಗೋವುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು ಆತಂಕ ವನ್ನೂ ಉಂಟುಮಾಡಿದೆ. ಗುರುವಾರ ರಾತ್ರಿ ಮಿನಿ ಇನ್ಸುಲೇಟರ್ ವಾಹನದೊಳಗೆ ಮೀನು ತುಂಬಿರುವ ಟ್ರೇಗಳನ್ನು ಇರಿಸಿಕೊಂಡು ಅದರ ಮಧ್ಯದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್ ಹತ್ತಿರ ಪಲ್ಟಿಯಾದ ಘಟನೆ ಸಂಭವಿಸಿದೆ. ಅಕ್ರಮ ಗೋ ಸಾಗಾಟ ಮಾಡುತ್ತಿದ್ದರಿಂದ ರಭಸದಿಂದ ವಾಹನ ಚಾಲನೆ ಮಾಡುತ್ತಿದ್ದು ಆ ಸಂದರ್ಭ ಈ ದುರ್ಘಟನೆ ನಡೆದಿದೆ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ.
*ವಾಹನ ಪಾಲ್ಟಿಯಾದ ಕೂಡಲೇ ಚಾಲಕ ಎಸ್ಕೇಪ್...!!*
ವಾಹನ ಪಲ್ಟಿಯಾದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದು ಮತ್ತಷ್ಟು ಅವಮಾನಗಳಿಗೆ ದಾರಿ ತೋರಿಸಿದಂತಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ದಾಖಲಾಗಿದೆ. ಈ ರೀತಿ ಅದೆಷ್ಟೋ ರೀತಿಯ ಸಂಚುಗಳಿಂದ ಮುಗ್ಧ ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಮಾಂಸದಂಧೆ ಮಾಡಿ ಮಾರಟಮಾಡುವ ಕಟುಕರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ಒತ್ತಿ ತಿಳಿಸಿದ್ದಾರೆ.