ಪುತ್ತೂರು ಉತ್ಸವದಲ್ಲಿ ಪಾಕಿಸ್ತಾನದ ರಾಷ್ಟ್ರ ಧ್ವಜದಂತೆ ಹೋಲುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಈ ದೃಶ್ಯವೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ

  • 17 Nov 2024 10:15:46 PM

ಪುತ್ತೂರಿನ ಹನುಮ ವಿಹಾರ ಮೈದಾನದಲ್ಲಿ ನಡೆಯುತ್ತಿರುವ ಪುತ್ತೂರು ಉತ್ಸವದಲ್ಲಿ ಪಾಕಿಸ್ತಾನದ ರಾಷ್ಟ್ರ ಧ್ವಜದಂತೆ ಹೋಲುವ ಹಸಿರು ಬಿಳಿ ಧ್ವಜದ ಮಾಡೆಲ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

 

ಇದು ಪುತ್ತೂರು ಉತ್ಸವವೋ ಅಥವಾ ಮತ ಪ್ರಚಾರ ಕಾರ್ಯಕ್ರಮವೋ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.... 
ಇಂತಹ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಸಾರ್ವಜನಿಕರು ಸ್ವಲ್ಪ ಯೋಚಿಸಬೇಕಾಗಿದೆ ಎಂಬುದು ಸ್ಥಳೀಯರ ವಾದ.... 


ಪುತ್ತೂರಿನಲ್ಲಿ ಅದೆಷ್ಟು ಎಕ್ಸಿಬಿಶನ್ ಉತ್ಸವಗಳು ನಡೆಯುತ್ತಿದ್ದು ಇಂತಹ ಒಂದು ದೃಶ್ಯಗಳೂ  ಕಾಣಲಿಲ್ಲವೆಂದು ಸ್ಥಳೀಯರು ತಿಳಿಸಿರುತ್ತಾರೆ . ... ಈ ವಿವಾದದ ಬಗ್ಗೆ ತನಿಖೆಯನ್ನು ನಡೆಸಿ ಸೂಕ್ತ ನಿರ್ಧಾರ ಹಾಗೂ ಕ್ರಮ ಕೈಗೊಳ್ಳಬೇಕು ಹಾಗೂ ಈ ವಿಷಯದ ಕುರಿತು ಉಂಟಾಗಿರುವ ಗೊಂದಲವನ್ನು ಪೊಲೀಸ್ ಇಲಾಖೆಯ ಸುಮ್ಮುಖದಲ್ಲಿ ಬಗೆಹರಿಸಿಕೊಡಬೇಕಾಗಿ ಹಿಂದೂ ಕಾರ್ಯಕರ್ತರ ಆಗ್ರಹ.