ಹಿಂದೂ ರಿಪಬ್ಲಿಕ್:- ಸಾಕಷ್ಟು ವಿರೋಧ ಎದುರಿಸುತ್ತಿರುವ ವಕ್ಫ್ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಸಾವಿರಾರು ರೈತರ, ಸಾಮಾನ್ಯ ಜನರ ಆಸ್ತಿಯಲ್ಲಿ ವಕ್ಫ್ ಒಳನುಸುಳುವಿಕೆ ಕಂಡುಬಂದಿದ್ದು. ಇದೀಗ ಶಾಸಕ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಒಟ್ಟಾರೆ 6ಲಕ್ಷ ಎಕರೆ ಭೂಮಿಯನ್ನು ವಕ್ಫ್ ಆಸ್ತಿ ಮಾಡಲು ಸಂಚು ರೂಪಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಯತ್ನಾಳ್ ನೀಡಿರುವ ಸ್ಪಷ್ಟನೆ ಈ ಕೆಳಗಿನಂತಿದೆ.
6 ಲಕ್ಷ ಎಕರೆ ವಕ್ಫ್ ಪಾಲಾಗುತ್ತಾ?
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್,'ವಕ್ಫ್ ನಿಂದಾಗಿ ರಾಜ್ಯದ ಜನರಿಗೆ ದೊಡ್ಡ ಅನ್ಯಾಯವಾಗಿದೆ.
ವಕ್ಫ್ ಟ್ರಿಬ್ಯುನಲ್ ಕೂಡಲೇ ರದ್ದಾಗಬೇಕು. ಈಗಾಗಲೇ ಒಟ್ಟು 2,700 ಎಕರೆ ಜಾಗ ಖಬರ್ ಸ್ತಾನಗೆ ಕೊಡಲು ಸರ್ಕಾರ ಹಾಗೂ ಕಂದಾಯ ಇಲಾಖೆ ಸಂಚು ರೂಪಿಸಿದೆ. ಒಟ್ಟಾರೆಯಾಗಿ 6 ಲಕ್ಷ ಎಕರೆ ವಕ್ಫ್ ಪಾಲಾಗುವ ಸಾಧ್ಯತೆ ಇದೆ' ಎಂದಿದ್ದಾರೆ.
ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು!
ಮಾತು ಮುಂದುವರೆಸಿದ ಉತ್ತರ ಕರ್ನಾಟಕದ ಹುಲಿ ಯತ್ನಾಳ್, 'ರಾಜ್ಯದ ಜನರಿಗೆ ಮೋಸ ಮಾಡಲು ಹೊರಟಿರುವ, ಬಡವರ ಹಾಗೂ ರೈತರ ಆಸ್ತಿ ಕಬಳಿಸಲು ಕುತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಸುಮನ್ನೆ ಬಿಡುವ ಮಾತೇ ಇಲ್ಲ. ಈಗಾಗಲೇ ಜನ ಜಾಗೃತಿ ಆರಂಭಿಸಿದ್ದೇವೆ. ಕೆಲವು ಕಡೆ ವಕ್ಫ್ ನೋಟಿಸ್ ಹಿಂಪಡೆಯದೇ ಆಸ್ತಿ ಕಬಳಿಕೆಯಾಗುತ್ತಿದೆ. ವಕ್ಫ್ ಟ್ರಿಬ್ಯುನಲ್ ರದ್ದಾಗುವ ವರೆಗೆ ನಾವು ಹೋರಾಟ ಮುಂದುವರೆಸುತ್ತೇವೆ' ಎಂದಿದ್ದಾರೆ.